ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಭಾರಿ ಮತಗಳ ಅಂತರದಿಂದ ಮೊದಲನೇ ಪ್ರಾಶಸ್ತ್ರದಲ್ಲೇ ಅಭೂತಪೂರ್ವ ಜಯಭೇರಿ ಬಾರಿಸಿದ್ದಾರೆ.
ಮೈಸೂರಿನಲ್ಲಿ ಮತ ಎಣಿಕೆ ಮುಕ್ತಾಯಗೊಂಡಿದ್ದು, ಡಾ. ಸರ್ಜಿ ಅವರು 22762 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ 37627 ಸಂಖ್ಯೆಯ ಭಾರಿ ಮತ ಗಳಿಸುವ ಮೂಲಕ ಡಾ. ಸರ್ಜಿ ಮೊದಲ ಚುನಾವಣೆಯಲ್ಲೇ ಭರ್ಜರಿ ಜಯ ದಾಖಲಿಸಿ ದಾಖಲೆ ನಿರ್ಮಿಸಿದ್ದಾರೆ.
ಚಲಾವಣೆಯಾದ 66497 ಮತಗಳಲ್ಲಿ 5115 ಮತಗಳು ತಿರಸ್ಕೃತಗೊಂಡಿವೆ. ಇನ್ನುಳಿದ 61382 ಮತಗಳಲ್ಲಿ ಡಾ. ಸರ್ಜಿ ಅವರು 37627 ಮತ ಗಳಿಸಿ, ವಿಜಯಮಾಲೆ ಧರಿಸಿದ್ದಾರೆ.
ಸರ್ಜಿ ಅವರ ಸಮೀಪ ಪ್ರತಿಸ್ಪರ್ಧಿ ಆಯನೂರು ಮಂಜುನಾಥ್ ಅವರು 13516 ಮತಗಳನ್ನು ಪಡೆದಿದ್ದಾರೆ.
ಮೈಸೂರಿನಲ್ಲಿ ಗುರುವಾರ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೊದಲನೇ ಪ್ರಾಶಸ್ತ್ರದಲ್ಲೇ ಅಭೂತಪೂರ್ವ ಗೆಲುವು ಸಾಧಿಸಿ ವಿಧಾನ ಪರಿಷತ್ ಗೆ ಆಯ್ಕೆ ಆದ ಬಳಿಕ ಚುನಾವಣಾಧಿಕಾರಿಗಳು ಡಾ.ಧನಂಜಯ ಸರ್ಜಿ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಪತ್ನಿ ಶ್ರೀಮತಿ ನಮಿತಾ ಸರ್ಜಿ, ಸೋದರ ಹರ್ಷ ಸರ್ಜಿ, ಮತ್ತಿತರರು, ಪಕ್ಷದ ನಾಯಕರು ಹಾಜರಿದ್ದರು.