ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎನ್. ಎಂ.ಎಂ.ಎಸ್. ವಿದ್ಯಾರ್ಥಿವೇತನಕ್ಕೆ ಅರ್ಹತೆ

0


ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ ಇಲ್ಲಿನ ಇಬ್ಬರು ವಿದ್ಯಾರ್ಥಿನಿಯರು 2023-24 ನೇ ಸಾಲಿನಲ್ಲಿ ನಡೆದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಪಡೆದು ಕೊಂಡಿದ್ದಾರೆ.
ದುಗ್ಗಲಡ್ಕ ಕೂಟೇಲು ನಿವಾಸಿ ಮಣಿಕಂಠ ಎಸ್. ಮತ್ತು ಭುವನೇಶ್ವರಿ ಎಂ. ದಂಪತಿ ಪುತ್ರಿ ಧನುಶ್ರೀ ಆರ್.ಹಾಗೂ ಕಂದಡ್ಕ ನಿವಾಸಿ ಶ್ರೀರಂಗನ್ ಟಿ. ಮತ್ತು ವೆಂಬು ದಂಪತಿ ಪುತ್ರಿ ತ್ರಿಶಾ ಎಸ್ ಆಯ್ಕೆಯಾದ ವಿದ್ಯಾರ್ಥಿಗಳು.
ಇವರಿಗೆ ಶಾಲಾ ಶಿಕ್ಷಕರು ತರಬೇತಿ ನೀಡಿರುತ್ತಾರೆ. ಮಕ್ಕಳ ಸಾಧನೆಯನ್ನು ಶಾಲಾ ಶಿಕ್ಷಕ ವೃಂದ ಮತ್ತು ಎಸ್ ಡಿ ಎಂ ಸಿ ಶ್ಲಾಘಿಸಿದೆ.