ರೋಟರಿ ಸುಳ್ಯ ಸಿಟಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

0

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜೂ. 06 ರಂದು ರೋಟರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ರೊ| ಗಿರೀಶ್ ನಾರ್ಕೋಡುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ರೊ| ಮಂಜುನಾಥರವರು ಪರಿಸರ ಸಂರಕ್ಷಣೆಯ ಮಹತ್ವಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ನಿಕಟಪೂರ್ವದ್ಯಕ್ಷ ರೊ| ಮುರಳೀಧರ ರೈ, ನಿಯೋಜಿತ ಅಧ್ಯಕ್ಷ ರೊ| ಶಿವಪ್ರಶಾದ್ ಕೆ ವಿ, ಕಾರ್ಯದರ್ಶಿ ರೊ| ಚೇತನ್ ಪಿ ಎನ್, ರೋಟರ್ಯಾಕ್ಟ್ ಸುಳ್ಯ ಯುನೈಟೆಡ್ ಅಧ್ಯಕ್ಷ ರೊ ರೇಮಂಡ್ ಹಾವರ್ಡ್ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ಮತ್ತು ರೋಟರ್ಯಾಕ್ಟ್ ಸುಳ್ಯ ಯುನೈಟೆಡ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸಸಿಗಳನ್ನು ಹಂಚಲಾಯಿತು.