ನೀಟ್ ಪರೀಕ್ಷೆ : ಮುಳ್ಯದ ಆಶಿತಾರಿಗೆ 629 ಅಂಕ

0

ವೈದ್ಯಕೀಯ ವೃತ್ತಿ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) -2024ರಲ್ಲಿ ಅಜ್ಜಾವರ ಗ್ರಾಮದ ಮುಳ್ಯ ಆಶಿತಾರವರು 720ರಲ್ಲಿ 629 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಅಜ್ಜಾವರ ಗ್ರಾಮದ ಮುಳ್ಯ ತಿರುಮಲೇಶ್ವರ ಗೌಡ ಹಾಗೂ ಜಯಂತಿ ಕೆ.ಕೆ. ದಂಪತಿಯ ಪುತ್ರಿಯಾಗಿರುವ ಆಶಿತಾ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಳ್ಯ ಅಟ್ಲೂರು ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪಡೆದು, ನೀಟ್ ಪರೀಕ್ಷೆಗೆ ಮೂಡಬಿದಿರೆಯ ಆಳ್ವಾಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.