ಶಾಂತಿನಗರ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಶಾಂತಿನಗರ ದೀಪಾಂಜಲಿ ಮಹಿಳಾ ಮಂಡಲ ಮತ್ತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ವಿಶ್ವಪರಿಸರದಿನಾಚರಣೆಯನ್ನು ಜೂ.5 ರಂದು ಶಾಲಾ ವಠಾರದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೀಪಾಂಜಲಿ ಮಹಿಳಾ ಮಂಡಲದ ವತಿಯಿಂದ ಶಾಲಾ ಮಕ್ಕಳಿಗೆ, ಮಹಿಳಾ ಮಂಡಲದ ಸದಸ್ಯರಿಗೆ,ಶಿಕ್ಷಕರಿಗೆ ರಂಬೋಟನ್ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಪರಿಸರದ ಮಹತ್ವವನ್ನು ಸಾರುವ ಗೀತೆಗಳನ್ನು ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.


ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ, ಅಧ್ಯಕ್ಷೆ ಶ್ರೀಮತಿ ಲಲಿತ ಮಂಚಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.