ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಪ್ರತಿವರ್ಷದಂತೆ PAGE (Planting And Growing Education) ಎಂಬ ಉಪ ಘಟಕವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ 200 ಗಿಡಗಳನ್ನು ವ “ಗಿಡ ನೆಟ್ಟು ಬೆಳೆಸಿ ಮತ್ತು ಪರಿಸರ ಉಳಿಸಿ” ಎಂಬ ಉದ್ದೇಶದಿಂದ ವಿತರಿಸುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ರುಕ್ಮಯ್ಯದಾಸರು ಮಕ್ಕಳಿಗೆ ಗಿಡಗಳನ್ನು ವಿತರಿಸಿ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ಅವರು ಸ್ವಚ್ಛತೆಯ ಆದ್ಯತೆಯನ್ನು ಮೊದಲು ನಾವು ನಮ್ಮ ಮನೆ ನಮ್ಮ ಊರು ಮತ್ತು ನಮ್ಮ ದೇಶ ಎಂಬ ಸಂಕಲ್ಪವನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ವಿದ್ಯಾರ್ಥಿಗಳಿಗೆ ಕಂಠಪಾಠ, ಚಿತ್ರಕಲೆ, ಆಶುಭಾಷಣ, ಪ್ರಹಸನ ಮತ್ತು ಮೂಕಾಭಿನಯ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪೋಷಕ ಸಮಿತಿಯ ಸದಸ್ಯರಾದ ಅಬುಸಾಲಿ ಪಿ.ಕೆ. ಅವರು ಪರಿಸರದ ಅಸಮತೋಲನದಿಂದ ಆಗಿರುವ ದುಷ್ಪರಿಣಾಮಗಳನ್ನು ಸರಿಪಡಿಸಬೇಕೆಂದು ತಿಳಿಸಿದರು.