ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 9 ರಂದು ಪ್ರಕಟಗೊಂಡಿದ್ದು , ಸುಳ್ಯದ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿ ಪಿ ಭಟ್, ಮರು ಎಣಿಕೆಯ ನಂತರದ ಫಲಿತಾಂಶದಲ್ಲಿ 598ರ ಬದಲಾಗಿ 607 ಅಂಕ ಪಡೆದುಕೊಂಡಿದ್ದಾರೆ.
ಪ್ರಥಮ ಫಲಿತಾಂಶದಲ್ಲಿ ವಿಜ್ಞಾನ ವಿಷಯ ಮೌಲ್ಯಮಾಪನದಲ್ಲಿ ಮೌಲ್ಯಮಾಪಕರ ಎಣಿಕೆ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯು 9 ಅಂಕಗಳನ್ನು ಕಳೆದುಕೊಂಡಿದ್ದಳು.
ವಿಜ್ಞಾನ ವಿಷಯದಲ್ಲಿ 86 ಅಂಕಗಳು ಬಂದಿದ್ದು ಮರು ಮೌಲ್ಯಮಾಪನದ ಬಳಿಕ 95 ಅಂಕಗಳನ್ನು ಪಡೆದುಕೊಂಡು ಒಟ್ಟು 09 ಅಂಕಗಳ ಹೆಚ್ಚಳದಿಂದ 607 ಅಂಕಗಳನ್ನು ಪಡೆದು 97.12 ಶೇಕಡಾವನ್ನು ತನ್ನದಾಗಿಸಿಕೊಂಡಿದ್ದಾಳೆ.