ಕಾಂಗ್ರೆಸ್ ಕಾರ್ಯಕರ್ತನಿಗೆ ಮೇನಾಲ ಕಾಂಗ್ರೆಸ್ ಸಮಿತಿಯಿಂದ ಒಂದು ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ – ಹಸ್ತಾಂತರ

0

ಮಾನವೀಯ ಕಾರ್ಯಕ್ಕೆ ಶ್ಲಾಘನೆ

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪ್ರಭಾಕರ ಬೆಳ್ಚಪ್ಪಾಡರಿಗೆ ಮೇನಾಲ ಕಾಂಗ್ರೆಸ್ ಸಮಿತಿ ವತಿಯಿಂದ ಒಂದು ಲಕ್ಷ ರೂ ವೆಚ್ಚ ಭರಿಸಿ, ಶ್ರಮ ಸೇವೆ ನಡೆಸಿ ಮನೆ ನಿರ್ಮಿಸಲಾಗಿದ್ದು, ಅದರ ಹಸ್ತಾಂತರ ಕಾರ್ಯ ಜೂ.9ರಂದು‌ ನಡೆಯಿತು.

ಸುಮಾರು 52 ವರ್ಷ ಪ್ರಾಯದ ಪ್ರಭಾಕರ ಬೆಳ್ಚಪಾಡರು ಅವಿವಾಹಿತರಾಗಿದ್ದು ಕೂಲಿ ಕೆಲಸ ಮಾಡುತಿದ್ದು, ಅವರಿಗೆ ಮನೆ ಇಲ್ಲ. ಮೇನಾಲದ ಬಾಡೇಲಿನಲ್ಲಿ ಏಕಾಂಗಿಯಾಗಿರುವ ಅವರು ತನಗಿರುವ ಜಾಗದಲ್ಲಿ ಪ್ಲಾಸ್ಟಿಕ್ ಜೋಪಡಿಯಲ್ಲಿ ವಾಸವಿದ್ದಾರೆ. 20 ವರ್ಷಗಳ ಹಿಂದೆ ಅಜ್ಜಾವರ ಗ್ರಾ.ಪಂ. ನಿಂದ ಮನೆ ಮಂಜೂರುಗೊಂಡು ಫೌಂಡೇಷನ್ ಹಾಕಿದ್ದರು ಹೊರತು ಮುಂದುವರಿಯಲಾಗಲಿಲ್ಲ.

ಪ್ರಭಾಕರರು ಜೋಪಡಿಯ ವಾಸ ಅರಿತಿದ್ದ ಅಜ್ಜಾವರ ಗ್ರಾ.ಪಂ. ಸದಸ್ಯ ಪ್ರಸಾದ್ ರೈ ಮೇನಾಲ, ಶ್ರೀಧರ ಲ, ಮೇನಾಲ, ರಂಜಿತ್ ರೈ ಮೇನಾಲ ಸಹಿತ ವಾರ್ಡ್ ಕಾಂಗ್ರೆಸ್ ಪದಾಧಿಕಾರಿಗಳು ಸೇರಿ ಹಾಕಲಾಗಿರುವ ಫೌಂಡೇಶನ್ ಗೆ ಕಲ್ಲುಕಟ್ಟಿ, ಮನೆ ಮಾಡಿಕೊಡುವ ನಿರ್ಧಾರ ಮಾಡಿದರು. ಇದಕ್ಕೆ ಕಾರ್ಯಕರ್ತರೆಲ್ಲರೂ ಸಹಾಯ ನೀಡಿದರಲ್ಲದೆ, ಶ್ರಮ ಸೇವೆ ನಡೆಸಿದರು. ಸುಮಾರು ಒಂದು ಲಕ್ಷ ವೆಚ್ಚದಲ್ಲಿ ಎರಡು ರೂಂ ನ ಮನೆ ಆಗಿದೆ. ಮೇಲ್ಛಾವಣಿಗೆ ಸಿಮೇಂಟ್ ಶೀಟ್ ಅಳವಡಿಸಲಾಗಿದೆ.

ಹಸ್ತಾಂತರ : ಜೂ.9ರಂದು ಭಾನುವಾರ ಮನೆ ಹಸ್ತಾಂತರ ಕಾರ್ಯಕ್ರಮ ಸರಳವಾಗಿ ನಡೆಯಿತು. ಕೃಷಿಕರಾದ ರವೀಂದ್ರನಾಥ ರೈ ಯವರು ಪ್ರಭಾಕರರಿಗೆ ಕೀ ಹಸ್ತಾಂತರ ಮಾಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ – ಹಾಲಿ ಸದಸ್ಯ ಪ್ರಸಾದ್ ರೈ‌ ಮೇನಾಲ, ಶ್ರೀಧರ ಮೇನಾಲ, ರಂಜಿತ್ ರೈ ಮೇನಾಲ, ಮೇಸ್ತ್ರಿ ಜಯರಾಮ ಮಣಿ ಮೇನಾಲ, ಪ್ರದೀಪ್ ಪೊಡುಂಬ, ದಾಮೋದರ ಕೊನ್ನೋಡಿ, ಗಂಗಾಧರ್ ಮೇನಾಲ, ಶರಣ್ಯ ತುದಿಯಡ್ಕ, ಸಂದೇಶ ಇರಂತಮಜಲು, ದಾಮೋದರ ಗೌಡ ಕೆದ್ಕಾರು, ಕರುಣಾಕರ ಬಾಡೇಲು, ಮಹಮ್ಮದ್ ಕುಂಞಿ ಮೇನಾಲ, ಪ್ರಕಾಶ ಕಲ್ಲಗುಡ್ಡೆ, ಅಣ್ಣಯ್ಯ ಗೌಡ ಕೆದ್ಕಾರ್, ನಾರಾಯಣ ಇರಂತಮಜಲು, ರಾಮಣ್ಣ ಗೌಡ ಕೆದ್ಕಾರ್, ಸಿದ್ದೀಕ್ ಇರಂತಮಜಲು, ರಾಜೇಶ್ ಗೌಡ ಮೇನಾಲ, ಅಬ್ದುಲ್ಲ ಬೇಲ್ಯ, ಚಂದ್ರಶೇಖರ ಪಲ್ಲತಡ್ಕ ಮೊದಲಾದವರಿದ್ದರು.

ಸುಜೀತ ರೈ ಮೇನಾಲ, ಸುಧಾಮಣಿ ಶೆಟ್ಟಿ, ಹಮೀದ್ ಮೇನಾಲ, ಶೌಕತ್ ಅಲಿ ಸಹಿತ ಕಾಂಗ್ರೆಸ್ ವಾರ್ಡ್ ಸದಸ್ಯರು ಮನೆ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದರೆ, ಮನೆ ಹಸ್ತಾಂತರ ದಿನದ ಮಧ್ಯಾಹ್ನದ ಭೋಜನದ ವ್ಯವಸ್ಥೆಗೆ ಅಜ್ಜಾವರ ಗ್ರಾ.ಪಂ. ಉಪಾಧ್ಯಕ್ಷ ಜಯರಾಮ ಅತ್ಯಡ್ಕ ಸಹಕಾರ ನೀಡಿದರು.