ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 108 ತೆಂಗಿನ ಕಾಯಿ ಗಣಪತಿ ಹವನ, ಅನುಜ್ಞಾ ಕಲಶ

0


ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಂಪಾಜೆ ಕೊಡಗು ಇದರ ಜೀರ್ಣೋದ್ಧಾರದ ಅಂಗವಾಗಿ ಪರಿಹಾರಾರ್ಥ ಕಾರ್ಯಗಳು ಮುಗಿದಿದ್ದು ಬ್ರಹ್ಮಶ್ರೀ ಆರೋಹತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜೂ. ೦೯ ಪ್ರಾರ್ಥನೆಯೊಂದಿಗೆ ಭಕ್ತರ ಸಮ್ಮುಖದಲ್ಲಿ ೧೦೮ ತೆಂಗಿನ ಕಾಯಿಯ ಗಣಪತಿ ಹವನ ನಡೆಸಿ, ಪೂರ್ಣಾಹುತಿಯಾಗಿ,ನಾಗನಕಟ್ಟೆಯ ಅನುಜ್ಞಾ ಕಲಶ ಮತ್ತು ಶ್ರೀ ಪಂಚಲಿಂಗೇಶ್ವರ ದೇವರಿಗೆ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿ, ನಂತರ ಪ್ರಸಾದ ಭೋಜನ ನಡೆಯಿತು.


ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು, ಅಧ್ಯಕ್ಷರು, ಕಾರ್ಯದರ್ಶಿಗಳು ಆಡಳಿತ ಮತ್ತು ಜೀರ್ಣೋದ್ಧಾರದ ಸಮಿತಿಯ ಸದಸ್ಯರು, ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.