ಸುಳ್ಯದ ಚಂದನ ಸಾಹಿತ್ಯ ವೇದಿಕೆಯಿಂದ ಮುಂಗಾರು ಕವಿಗೋಷ್ಠಿ ಮತ್ತು ಕೃತಿ ಬಿಡುಗಡೆ

0

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಮುಂಗಾರು ಕವಿಗೋಷ್ಠಿ ಮತ್ತು ಧಾರ್ಮಿಕ ಕೃತಿ ಬಿಡುಗಡೆ ಕಾರ್ಯಕ್ರಮ ಜೂ. 9 ರಂದು ಜರುಗಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಜ್ಯೋತಿಷ್ಯರು, ಗಾಯಕ, ಚಿತ್ರ ನಿರ್ದೇಶಕರಾದ ಎಚ್ ಭೀಮರಾವ್ ವಾಷ್ಠರ್ ರವರು ವಹಿಸಿದ್ದರು. ಉದ್ಘಾಟನೆಯನ್ನು ಚೈತನ್ಯ ಸೇವಾಶ್ರಮ ಇದರ ಸಂಚಾಲಕರಾದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ಳಾರೆಯ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು, ಸುದ್ದಿ ಬಿಡುಗಡೆ ವಾರಪತ್ರಿಕೆಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶಾರದಾ ರವರು ಭಾಗವಹಿಸಿದ್ದರು.

ಪುತ್ತೂರಿನ ಉಪ ತಹಶೀಲ್ದಾರರು ಮತ್ತು ಮಹಿಳಾ ಸಾಹಿತಿ ಸುಲೋಚನಾ ಪಿ ಕೆ ಇವರ ಅಧ್ಯಕ್ಷತೆಯಲ್ಲಿ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಶ್ರೀ ಯೋಗೇಶ್ವರ ನಂದ ಸರಸ್ವತಿ ಸ್ವಾಮೀಜಿಯವರ 205 ನೇ ಧಾರ್ಮಿಕ ಕೃತಿ ಅದ್ವೈತ ಆತ್ಮ ಬಿಡುಗಡೆಗೊಂಡಿತು. ಯುವ ಗಾಯಕರಾದ ಅರುಣ್ ರಾವ್ ಜಾದವ್, ಎ. ವಿಜಯಕುಮಾರ್ ಅಜ್ಜಾವರ ಮತ್ತು ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕವಿಗೋಷ್ಠಿಯಲ್ಲಿ ಯಶಸ್ವಿ ಗಣೇಶ ಸೋಮವಾರಪೇಟೆ, ನಾರಾಯಣ ಕುಂಬ್ರ, ಶ್ರೀಮತಿ ಅಕ್ಷತಾ ನಾಗನಕಜೆ, ಪುಷ್ಪ ಎಡಮಂಗಲ ಸುಳ್ಯ, ಚಂದ್ರಹಾಸ ಕುಂಬಾರ ಬಂದಾರು, ಶ್ರೀಮತಿ ರಶ್ಮಿತಾ ಸುರೇಶ ಜೋಗಿಬೆಟ್ಟು, ಶೇಖರ್ ಎಂ ದೇಲಂಪಾಡಿ , ಮನಿಶಾ ಕೆ, ಶಿಲ್ಪ ಕೆ ಎನ್, ಪೂರ್ಣಿಮಾ ಗಿರೀಶ್ ಗೌಡ ಕುತ್ತಿಮಂಡ, ತಶ್ವಿ ಶಾಂಭವಿ ಜೋಗಿಬೆಟ್ಟು, ಗಿರೀಶ್ ಉಪ್ಪಿನಂಗಡಿ, ಪೂರ್ಣಿಮಾ ಪ್ರಲಂಪಾಡಿ, ಪ್ರಣವಿ ಎಂ , ವೀಕ್ಷಾ ಪಿ ಆರ್, ಸುಮಂಗಲ ಲಕ್ಷ್ಮಣ ಕೋಳಿವಾಡ ಇನ್ನಿತರರು ಭಾಗವಹಿಸಿದ್ದರು.

ಪ್ರಾರ್ಥನಾ ಗೀತೆಯನ್ನು ಪೆರುಮಾಳ್ ಲಕ್ಷ್ಮಣ್ ಐವರ್ನಾಡು ರವರು ಹಾಡಿದರು. ಶ್ರೀಮತಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಸ್ವಾಗತಿಸಿದರು. ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ್ ಕಾರ್ಯಕ್ರಮ ನಿರೂಪಿಸಿದರು.