ಜಬ್ಬಾರ್ ಸಮೋರಿಗೆ ಯಕ್ಷಕಲಾ ರಂಗ ಪ್ರಶಸ್ತಿ

0

ಯಕ್ಷಗಾನದ ಅಭಿವೃದ್ಧಿ ಮತ್ತು ಯಕ್ಷ ಕಲಾವಿದರ ಸಂಕಷ್ಟಗಳಿಗಾಗಿ ಸ್ಪಂದಿಸುವ ಸಂಸ್ಥೆಯಾದ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ಯಕ್ಷಗಾನ ತಾಳಮದ್ದಳೆಯ ವಾಚಿಕ ವಿಭಾಗಕ್ಕೆ ಕಲಾ ಪೋಷಕ ಮಟ್ಟಿ ಮುರಳೀಧರ ರಾವ್ ಮತ್ತು ಅರ್ಥದಾರಿ ಪಂಡಿತ ಪೆರ್ಲ ಕೃಷ್ಣ ಭಟ್
ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ಅರ್ಥದಾರಿ ಹಾಗೂ ಹವ್ಯಾಸಿ ವೇಷಧಾರಿ ಸಂಪಾಜೆಯ ಜಬ್ಬಾರ್ ಸ.ಮೋ. ರವರಿಗೆ ನೀಡಿ ಗೌರವಿಸಿದೆ. ಪ್ರಶಸ್ತಿಯು ೨೦ ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ್ದು, ಜೂನ್ ೨೩ ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

ಜಬ್ಬಾರ್ ಸಮೋ ರವರು, ಮಾಜಿ ತಾ.ಪಂ. ಸದಸ್ಯ ಹಾಗೂ ಸಂಪಾಜೆ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ದಿ|ಎಸ್.ಎಂ.ಮಹಮ್ಮದ್‌ರವರ ಕಿರಿಯ ಸಹೋದರ. ರೇಷ್ಮೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ನಿವೃತ್ತರಾದವರು. ತನ್ನ ನಿರರ್ಗಗಳ ವಾಗ್ಝರಿಯ ಯಕ್ಷಗಾನ ಅರ್ಥಗಾರಿಕೆಗೆ ಹೆಸರಾದವರು. ಈಗ ಪುತ್ತೂರಿನ ಪಡೀಲ್‌ನಲ್ಲಿ ನೆಲೆಸಿದ್ದಾರೆ.