ಕೇರಳದ ಮಾಧ್ಯಮಗಳಲ್ಲಿ ಸುದ್ದಿಯಾದ ಈ ಬಾಲೆ ಸುಳ್ಯದವಳು
ಪಾಸ್ ಪೋರ್ಟ್ ಸಲ್ಲಿಕೆ ದಿನ ಮುಂದೂಡಿಕೆಯಾದುದರಿಂದ ಪವಿತ್ರ ಮಕ್ಕಾಗೆ ತೆರಳಲು ಪುಟ್ಟ ಬಾಲೆಗೆ ಅವಕಾಶ ದೊರೆತಿದ್ದು, ಇದು ಕೇರಳದ ಮಾಧ್ಯಮಗಳಲ್ಲಿ ಪ್ರಚಾರ ಪಡೆದಿದೆ. ಈ ಮಗು ಸುಳ್ಯದವಳು.
ಸುಳ್ಯದಿಂದ ಈ ಬಾರಿ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲು ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಬಳಿ ಉಬರಡ್ಕ ರಸ್ತೆ ಬಳಿ ನಿವಾಸಿ ಆರೀಸ್ ಉಮ್ಮರ್ ಮತ್ತು ತ್ವಬಾ ದಂಪತಿಗಳು ಅರ್ಜಿ ಸಲ್ಲಿಸಿದ್ದರು.
ಹಜ್ಜ್ ಯಾತ್ರೆ ಕೈಗೊಳ್ಳಲು ಅರ್ಜಿಸಲ್ಲಿಸಿದ ದಂಪತಿಗಳ ಜೊತೆ ಪುಟ್ಟ ಮಗು ರೂಹಿ ಹೈರಿನ್ ಹೆಸರು ಸೇರಿಸಿ ಅರ್ಜಿ ಸಲ್ಲಿಸಿದ್ದರು.
ಆಗ ಮಗುವಿಗೆ ಮೂರು ತಿಂಗಳು ಪ್ರಾಯವಾಗಿತ್ತು.
ಮಗುವಿನ ಪಾಸ್ ಪೋರ್ಟ್ ಕೈಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ದಂಪತಿಗೆ ಪಾಸ್ ಪೋರ್ಟ್ ಸಿಗದೆ ನಿರಾಶೆಯಾಗಿತ್ತು.
ಕೊನೆಗೆ ಹಜ್ಜ್ ಯಾತ್ರೆಗೆ ಪಾಸ್ ಪೋರ್ಟ್ ಸಲ್ಲಿಸುವ ದಿನವೂ ಕಳೆಯಿತು. ಹೀಗಾಗಿ ದಂಪತಿ ತಮ್ಮ ಜೊತೆ ಕರೆದುಕೊಂಡು ಹೋಗಬೇಕಾದ ಪುಟ್ಟ ಮಗವನ್ನು ಊರಿನಲ್ಲಿ ಬಿಟ್ಟು ಹಜ್ಜ್ ಯಾತ್ರೆ ಕೈಗೊಳ್ಳುವ ತೀರ್ಮಾನದಲ್ಲಿದ್ದರು.
ವಿಶೇಷವೆಂದರೆ ಈ ಸಂದರ್ಭದಲ್ಲಿ ಅವರಿಗೆ ಪಾಸ್‌ಪೋರ್ಟ್ ಸಲ್ಲಿಸುವ ದಿನವನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಬಂತು. ಅದಾಗಲೇ ಮಗುವಿನ ಪಾಸ್ ಪೋರ್ಟ್ ಕೂಡಾ ಕೈಸೇರಿತ್ತು.
ಕೂಡಲೇ ಮಗುವಿನ ಪಾಸ್‌ಪೋರ್ಟ್ ಸಲ್ಲಿಸಿ ಮಗುವನ್ನೂ ಕರೆದುಕೊಂಡು ಪವಿತ್ರ ಹಜ್ಜ್ ಯಾತ್ರೆಗೆ ಕಣ್ಣೂರು ವಿಮಾನ ನಿಲ್ದಾಣದಿಂದ ತೆರಳಿದರು.
ಆರಿಶ್ ಮತ್ತು ತೈಬಾ ಬೆಂಗಳೂರಿನಲ್ಲಿ ಕಂಪೆನಿ ಉದ್ಯೋಗಿಯಾಗಿದ್ದಾರೆ.
ತೈಬಾ ಹೆರಿಗೆ ರಜೆ ಪಡೆದು ಹಜ್ಜ್ ಯಾತ್ರೆ ತೆರಳಿದ್ದರು ಅವರ ಜೊತೆಯಲ್ಲಿ ಆರಿಶ್ ಅವರ ತಾಯಿ ಅಶ್ಮಾಬಿಯವರು ಹಜ್ಜ್ ಯಾತ್ರೆ ಕೈಗೊಂಡಿದ್ದಾರೆ.