ಬೆಳ್ಳಾರೆಯ ಎ.ಪಿ.ಎಂ.ಸಿ ಮಾರುಕಟ್ಟೆಯ ಬಳಿ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ಜೂ.10 ರಂದು ನಡೆದಿದೆ.
ಮೃತ ಮಹಿಳೆ ಬೆಳ್ಳಾರೆ ಸಮೀಪದ ಪಾಟಾಜೆಯ ನಳಿನಿ ಎಂದು ಗುರುತಿಸಲಾಗಿದ್ದು ತಲೆಗೆ ಕಲ್ಲಿನಿಂದ ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹೊಟೆಲ್ ಹಾಗೂ ಇತರ ಕಡೆ ಕೂಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ರಾತ್ರಿ ಮನೆಗೆ ಹೋಗದೆ ಮದ್ಯ ಸೇವನೆ ಮಾಡಿ ಬೆಳ್ಳಾರೆ ಎ.ಪಿ.ಎಂ.ಸಿ ಸಂತೆ ಮಾರುಕಟ್ಟೆಯಲ್ಲಿ ಮಲಗಿದ್ದು ರಾತ್ರಿ ಯಾರೋ ತಲೆಗೆ ಕಲ್ಲು ಎತ್ತಿ ಹಾಕಿ ಕೊಂದಿರುವಂತೆ ಸಂಶಯಿಸಲಾಗಿದೆ.
ತಲೆಯ ಒಂದು ಭಾಗಕ್ಕೆ ಗಾಯವಾಗಿದ್ದು ರಕ್ತ ಚೆಲ್ಲಿಹೋಗಿದೆ.ತಲೆಯ ಸಮೀಪ ಕಲ್ಲು ಅಲ್ಲೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆನ್ನಲಾಗಿದೆ.
ಬೆಳ್ಳಾರೆ ಪೊಲೀಸರು ಹಾಗೂ ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣರವರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಪ್ರಾರಂಭಿಸಿದ್ದಾರೆ.
ಸ್ಥಳದಲ್ಲಿ ಸಾರ್ವಜನಿಕರು ಸೇರಿದ್ದು ಮೇಲಾಧಿಕಾರಿಗಳು ಸ್ಥಳಕ್ಕೆ ಬರಲಿದ್ದಾರೆಂದು ತಿಳಿದು ಬಂದಿದೆ.
ಮೃತ ನಳಿನಿಯವರಿಗೆ 55 ವರ್ಷ ಪ್ರಾಯವಾಗಿದ್ದು ಪತಿ ಸುಂದರ,ಪುತ್ರಿಯರಾದ ಕವಿತ,ಅರುಣ ರವರನ್ನು ಅಗಲಿದ್ದಾರೆ.