ಬೆಳ್ಳಾರೆ : ವಿಪರೀತ ಗಾಳಿ ಮಳೆ : ಧರೆಗುರುಳಿದ ವಿದ್ಯುತ್ ಕಂಬಗಳು

0

ಬೆಳ್ಳಾರೆ ಮತ್ತು ಐವರ್ನಾಡಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ,ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಬೆಳ್ಳಾರೆಯಿಂದ ಐವರ್ನಾಡು ವರೆಗೆ ಮೈನ್ ಲೈನ್ ನ ಸುಮಾರು 7 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು ಅಪಾರ ಹಾನಿಯಾಗಿದೆ.

ಇಂದು ವಿದ್ಯುತ್ ಲೈನ್ ದುರಸ್ಥಿ ಕಾರ್ಯ ಭರದಿಂದ ನಡೆಯುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಜೆ.ಇ.ಪ್ರಸಾದ್ ಕತ್ಲಡ್ಕ ತಿಳಿಸಿದ್ದಾರೆ.