ಕಲ್ಲಪಳ್ಳಿ ನಿವಾಸಿ ಭರತ ಗೌಡ ಮಿತ್ತಡ್ಕ ರವರ ಪತ್ನಿ ಶ್ರೀಮತಿ ಪಾರಿಜಾತರವರು ಇಂದು ಬೆಳಗ್ಗೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.
ಅವರು ಮನೆಯಲ್ಲಿ ಇರುವ ಸಂದರ್ಭ ಮೆದುಳಿನ ರಕ್ತಸ್ರಾವಕ್ಕೊಳಪಟ್ಟಿದ್ದು
ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮೃತರು ಪುತ್ರರಾದ ಅಂಕಿತ್ ಮತ್ತು ಲವಿತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.