ಮುಡ್ನೂರು ಮರ್ಕಂಜ ಶಾಲೆಯ ನೂತನ ಎಸ್‌ಡಿಎಂಸಿ ರಚನೆ

0

ಅಧ್ಯಕ್ಷ: ವಿಜಯಕುಮಾರ್ ಎರ್ಮೆಟ್ಟಿ, ಉಪಾಧ್ಯಕ್ಷೆ:ಸುಜಾತಕುಮಾರಿ

ಮುಡ್ನೂರು ಮರ್ಕಂಜ ದ.ಕ. ಜಿ.ಪಂ. ಸ. ಹಿ. ಪ್ರಾ. ಶಾಲೆಯ ಪೋಷಕರ ಸಭೆ ಮತ್ತು ನೂತನ ಎಸ್‌ಡಿಎಂಸಿ ರಚನೆಯು ಜೂ.೧೦ ರಂದು ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ಗೀತಾ ಹೊಸೋಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ವಿಜಯಕುಮಾರ ಎರ್ಮೆಟ್ಟಿ, ಉಪಾಧ್ಯಕ್ಷರಾಗಿ ಸುಜಾತಕುಮಾರಿ ಅಂಗಡಿಮಜಲು, ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕ ದೇವರಾಜ ಎಸ್.ಕೆ. ಆಯ್ಕೆಯಾದರು.
ಸದಸ್ಯರುಗಳಾಗಿ ಜಗನ್ನಾಥ ಜಿ., ಯೋಗೀಶ ಎಂ.ಬಿ., ರಮೇಶ ಪಡ್ಡಂಬೈಲು, ಆನಂದ ಕುದ್ಪಾಜೆ, ಅನಿತಾ ಮೇಲೆಪುರ, ಪೂರ್ಣಿಮಾ ಬೂಡು, ಭಾರತಿ ಸಂಕೇಶ, ಭವಾನಿ ಗೋಳಿಯಡ್ಕ, ಪವಿತ್ರ ಪನ್ನೆ, ಜಯಪ್ರಕಾಶ ಎಂ., ಚಂದ್ರಶೇಖರ ಹೊಸೋಳಿಕೆ, ಗುರುಪ್ರಸಾದ್ ಗೋಳಿಯಡ್ಕ, ಅಶ್ವಿನಿ ಗೋಳಿಯಡ್ಕ, ಉಷಾ ಕಬ್ಬಿನಡ್ಕ, ಭವಾನಿ ಜಿ., ಚಿತ್ರ ನಳಿಯಾರು ಆಯ್ಕೆಯಾದರು.
ಹಿರಿಯ ಶಿಕ್ಷಕ ಬೆಳ್ಯಪ್ಪರು ಕಾರ್ಯಕ್ರಮ ನಿರೂಪಿಸಿದರು.