ಊರುಬೈಲಿನಲ್ಲಿ ಮನೆ ಮೇಲೆ ಬಿದ್ದ ತೆಂಗಿನ ಮರ : ಹಾನಿ

0

ಚೆಂಬು ಗ್ರಾಮದ ಊರುಬೈಲಿನಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಬಿದ್ದು ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಊರುಬೈಲಿನ ಕೊರಗಪ್ಪ ಎಂಬವರ ಮನೆಗೆ ನಿನ್ನೆ ರಾತ್ರಿ (ಜೂ.10) ಮನೆ ಪಕ್ಕದಲ್ಲಿದ್ದ ತೆಂಗಿನ ಮರ ಬಿದ್ದಿದೆ. ಪರಿಣಾಮ ಮನೆಯ ಛಾವಣಿ ಹಾಗೂ ಗೋಡೆ ಬಿರುಕು ಬಿಟ್ಟಿರುವುದಾಗಿ ವರದಿಯಾಗಿದೆ.

ಕೊರಗಪ್ಪರ ಮನೆಯ ಸಮೀಪ ಇದ್ದ ಬೃಹದಾಕಾರದ ಮರ ತೆಂಗಿನ ಮರದ ಮೇಲೆ ಬಿದ್ದು ತೆಂಗಿನಮರ ಮನೆ ಮೇಲೆ‌ ಮಗುಚಿರುವುದಾಗಿ ತಿಳಿದುಬಂದಿದೆ. ಎರಡು ವಿದ್ಯುತ್ ಕಂಬ ಕೂಡಾ ನೆಲಕ್ಕುರುಳಿದೆ.