” ಒಂದು ಸರಕಾರಿ ಶಾಲೆ ಹೇಗಿರಬೇಕೆಂಬುದಕ್ಕೆ ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಉದಾಹರಣೆಯಾಗಿದೆ. ಸರಕಾರ ಕೆಪಿಎಸ್ ಸ್ಕೂಲ್ ಗೆ ಕಾವು ಶಾಲೆಯನ್ನೇ ಮಾದರಿಯನ್ನಾಗಿ ಪರಿಗಣಿಸಬಹುದಾಗಿದೆ” ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಕಾವು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಭಾಸ್ಕರ ಗೌಡ ನರಿಯೂರು ಅವರ ವಿದಾಯ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಕೆಪಿಎಸ್ ಸ್ಕೂಲ್ ಮತ್ತು ಪ್ರೌಢಶಾಲೆ ಬೇಡಿಕೆ: ಕಾವಿನಲ್ಲಿ ಈಗ ಎಂಟನೇ ತನಕ ತರಗತಿಗಳು ನಡೆಯುತ್ತಿವೆ. ಮುಂದೆ ಇದನ್ನು ಪ್ರೌಢ ಶಾಲೆಯನ್ನಾಗಿ ಪರಿ
ವರ್ತಿಸಬೇಕು ಮತ್ತು ಕೆಪಿಎಸ್ ಸ್ಕೂಲ್ ಆಗಿ ಮಾಡಬೇಕು ಎಂದು ಶಾಲಾ ಅಭಿವೃದ್ಧಿ ಸಮಿತಿಯವರ ಮೂಲಕ ಕಾವು ಹೇಮನಾಥ ಶೆಟ್ಟಿ ಅವರು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ಮೊದಲ ಆದ್ಯತೆಯಲ್ಲೇ ನಿಮ್ಮ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಹೇಳಿದರು.
ಕಾವು ಹೇಮನಾಥ ಶೆಟ್ಟಿ ಮಾತನಾಡಿ, ” ಕಾವು ಶಾಲೆಯಲ್ಲಿ ಪ್ರಸ್ತುತ 480 ಮಕ್ಕಳಿದ್ದಾರೆ. ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಎಸಿ ಅಳವಡಿಸಲಾಗಿದೆ, ಎಲ್ಲ ಕಠಡಿಗಳಿಗೂ ಫ್ಯಾನ್, ಮೈಕ್ ವ್ಯವಸ್ಥೆ ಇದೆ. ಮನೆಯಿಂದ ಶಾಲೆಗೆ ಬರಲು ಬಸ್ ಸೌಕರ್ಯವೂ ಇದೆ ಎಂದು ಹೇಳಿದರು.
ಮೈಸೂರಿನ ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಮ್. ರಾಧಾಕೃಷ್ಣ ಮೂರ್ಜೆ ಅಭಿನಂದನಾ ಮಾತುಗಳನ್ನಾಡಿದರು. ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ನ ಅಚ್ಚುತ್ತ ಮೂಡೆತ್ತಾಯ, ಕಾವು ಹಾಲು ಉತ್ಪಾದಕ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್, ಗ್ರಾಪಂ ಸದಸ್ಯರಾದ ದಿವ್ಯನಾಥ ಶೆಟ್ಟಿ ಕಾವು, ಬಿ.ಕೆ. ಅಬ್ದುಲ್ ರಹಿಮಾನ್, ಸಲ್ಮಾ, ಪ್ರವೀಣಾ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಕೆ.ಕೆ. ಇಬ್ರಾಹಿಂ ಹಾಜಿ, ಕಾವು ಕ್ಲಸ್ಟರ್ ಸಿಆರ್‌ಪಿ ಕೆವಿಎಲ್‌ಎನ್ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷ ಯತೀಶ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಪ್ರಮೀಳಾ ವಂದಿಸಿದರು.