ಸುಳ್ಯ ಎನ್ನೆoಪಿಯುಸಿಯಲ್ಲಿ ಯೋಗ ದಿನಾಚರಣೆ

0


ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ವಸ್ಥ ವ್ರತ ವಿಭಾಗದ ಅಸೋಸಿಯೇಟ್ ಪ್ರೊಪೆಸರ್ ಡಾ ಶಬೀನಾ ಟಿ ಟಿ ಅವರು ಆಗಮಿಸಿ ಮನಸ್ಸಿನ ಏಕಾಗ್ರತೆ, ಅರೋಗ್ಯವಂತರಾಗಿರಲು ಅನುಸರಿಸಬೇಕಾದ ಧ್ಯಾನ, ಮುದ್ರಗಳನ್ನು ತಿಳಿಸಿಕೊಟ್ಟರು.ಅಧ್ಯಕ್ಷತೆ ವಹಿಸಿದ್ದಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ಮಾತನಾಡಿ ಪ್ರಾಚೀನ ಹಿನ್ನಲೆ ಇರುವ ಯೋಗವನ್ನು ದೈನಂದಿನ ಅಭ್ಯಾಸ ಕ್ರಮವಾಗಿ ರೂಢಿಸಿಕೊಳ್ಳಬೇಕು. ಮಾನಸಿಕ, ದೈಹಿಕವಾಗಿ ನಾವು ಸದೃಢರಾಗಲು ಯೋಗ ಸಹಕಾರಿ ಎಂದರು.

ಕೆವಿಜಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ರಾಜಲಕ್ಷ್ಮಿ, ಚಿತ್ರಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಮಂತ್ ಸ್ವಾಗತಿಸಿ, ಕೃತ ಸ್ವರ ದೀಪ್ತ ಕೆ ಅತಿಥಿಗಳನ್ನು ಪರಿಚಯಿಸಿದರು. ಗಾಯತ್ರಿ ನಿರೂಪಿಸಿ, ರಿಯಾ ಕೆ ಜೆ ವಂದಿಸಿದರು.ಕಾಲೇಜಿನ ಬೋಧಕ ಬೋಧಕೇತರ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.