ಮಾವಿನಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಪ್ರಾಣಾಯಾಮ ಗಳನ್ನು ಮಾಡಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ರಾಧಿಕಾ ಕೆ.ಎಸ್. ಮಕ್ಕಳಿಗೆ ಯೋಗ ಪ್ರಾಣಾಯಾಮಗಳನ್ನು ಮಾಡಿಸಿದರು.
ಶಾಲಾ ಶಿಕ್ಷಕಿ ಅಶಾ ಯೋಗ ಮಂತ್ರವನ್ನು ಬೋಧಿಸಿದರು. ಶಿಕ್ಷಕ ದಯಾನಂದ ಅವರು ಯೋಗ ದಿನಾಚರಣೆಯ ಮಹತ್ವ ಮತ್ತು ಯೋಗ ಮಾಡುವುದರಿಂದ ನಮ್ಮ ಆರೋಗ್ಯದ ವೃದ್ದಿಯ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ಎಲ್ಲಾ ಮಕ್ಕಳು ಭಾಗವಹಿಸಿದ್ದರು.