ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

0


ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 10ನೇ ಅಂತರರಾಷ್ಟ್ರೀಯ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಸಂದೇಶದ ಯೋಗ ದಿನವನ್ನು ಆಚರಿಸಲಾಯಿತು.


ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ರವರು ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆಧುನಿಕ ಜೀವನಶೈಲಿಯಿಂದ ಆಗುವ ದುಷ್ಪರಿಣಾಮಗಳನ್ನು ತಡೆಯಲು ಸಾಧ್ಯ ಮತ್ತು ಯೋಗದ ಮಹತ್ವವನ್ನು ತಿಳಿಸಿಕೊಟ್ಟ ನಮ್ಮ ದೇಶದ ಗಣ್ಯ ವ್ಯಕ್ತಿಗಳಿಗೆ ನಾವು ಸದಾ ಚಿರಋಣಿ ಎಂದು ತಿಳಿಸಿದರು.
ಶಿಕ್ಷಕ ಧನರಾಜ್ ಬಿ ಮತ್ತು ದೈಹಿಕ ಶಿಕ್ಷಕಿ ರಮ್ಯಾ ಡಿ ರವರ ಮಾರ್ಗದರ್ಶನದಲ್ಲಿ ಪ್ರಾಂಶುಪಾಲರು, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕಿಯರು ಯೋಗಾಭ್ಯಾಸ ಮಾಡಿದರು.