ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಸಕ್ಸಸ್ ಹೆಲ್ಪ್ ಲೈನ್ ಸುಣ್ಣಮೂಲೆ ಮತ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಲಬ್ ಬ್ಲಡ್ ಬ್ಯಾಂಕ್ ಪುತ್ತೂರು ಸಹಭಾಗಿತ್ವದಲ್ಲಿ ಸುಣ್ಣಮೂಲೆಯ ಮಸೀದಿ ಕಾಂಪ್ಲೆಕ್ಸ್ ನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗು ಸನ್ಮಾನ ಕಾರ್ಯಕ್ರಮವು ಜೂ.22ರಂದು ನಡೆಯಿತು.
ರಕ್ತದಾನ ಶಿಬಿರವನ್ನು ನ್ಯಾಯವಾದಿ ಮಹಮ್ಮದ್ ಫವಾಜ್ ಕನಕಮಜಲು ಅವರು ಉದ್ಘಾಟಿಸಿ, ಶುಭಹಾರೈಸಿದರು. ಸಕ್ಸಸ್ ಹೆಲ್ಪ್ ಲೈನ್ ಸುಣ್ಣಮೂಲೆ ಅಧ್ಯಕ್ಷ ಇಕ್ಬಾಲ್ ಎಸ್.ಎ. ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಬಾಪತಿಗಳಾದ ಸುಧಾಕರ್ ರೈ ಮುಖ್ಯ ಅಥಿತಿಗಳಾಗಿ ಬಾಗವಹಿಸಿ ಮಾತನಾಡಿ , ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಒಟ್ಟು 37 ಮಂದಿ ರಕ್ತದಾನಿಗಳು,
ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರೋಗಿಗಳ ಜೀವವನ್ನು ಉಳಿಸುವ ಕಾರ್ಯಕ್ಕೆ ಕೈ ಜೋಡಿಸಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿ ನಿಯರನ್ನು ಹಾಗೂ ನಿವೃತ ಅಧ್ಯಾಪಕ ಬಾಸ್ಕರ್ ಮಾಸ್ತರ್ ನರಿಯೂರು ಅವರನ್ನು ಸನ್ಮಾನಿಸಲಾಯಿತು.
ಸ್ವಲಿಹ್ ಹನೀಫಿ ದುವಾ ನಡೆಸಿಕೊಟ್ಟರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ಉಪ ಸಬಾಪತಿ ಮುಸ್ತಾಫ ಜನತಾ, ಕನಕಮಜಲು ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹಿಂ ಕಾಸಿಂ ,ಶ್ರೀ ಆತ್ಮಾರಾಮ ಭಜನಾ ಮಂದಿರದ ನಿರ್ದೇಶಕ ವಿಜಯ ಕುಮಾರ್ ನರಿಯೂರು ,ಎ. ಬಿ. ಜೆ. ಎಂ. ಜುಮಾ ಮಸೀದಿ ಅಧ್ಯಕ್ಷ ಬಾಪು ಪಿ. ಎ. ,ಬಿ.ಜೆ.ಎಮ್. ಜುಮಾ ಮಸೀದಿ ಅದ್ಯಕ್ಷ ಹಸೈನಾರ್ ಕೆ.ಸಿ., ಕನಕಮಜಲಿನ ಶ್ರೀ ನರಿಯೂರು ರಾಮಣ್ಣ ಗೌಡ ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ಅದ್ಯಕ್ಷ ಹಮೀದ್-ಗೌಸಿಯಾ , ಕರ್ನಾಟಕ ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕ ಅಲಿ ಪರ್ಲಡ್ಕ,ಇಫಾಜ್ ಬನ್ನೂರು ,ವಕೀಲರಾದ ಅವಿನಾಶ್ ಕಾರಿಂಜ ,ಅಬೂಬಕರ್ ಪೂಪಿ ,ರವಿ ಪ್ರಕಾಶ್ ಬುಡ್ಲೆಗುತ್ತು ,ಎಸ್.ಎಸ್. ಎಫ್. ಅಧ್ಯಕ್ಷ ಕರೀಂ ಟಿ. ಎಂ. ,ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ರಫೀಕ್ ಮೂಲೆ ,ಅಬ್ದುಲ್ಲ ಎಸ್. ಎಂ. ,ಅಬ್ದುಲ್ ರಹ್ಮಾನ್ ಶಾಲಿಮಾರ್ ,ಮೊಹಿದೀನ್ ಬಿ.ಕೆ.
ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸದಸ್ಯರುಗಳು, ಸುಣ್ಣಮೂಲೆ ಸಕ್ಸಸ್ ಹೆಲ್ಪ್ ಲೈನ್ ಮುಖ್ಯಸ್ಥರು , ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಮೀದ್ ಗೌಸಿಯಾ ಸ್ವಾಗತಿಸಿ , ಕಾರ್ಯ ನಿರೂಪಿಸಿದರು. ಇಕ್ಬಾಲ್ ಎಸ್.ಎ. ವಂದಿಸಿದರು.