ಮಾವಿನಕಟ್ಟೆ ಶಾಲೆಯಲ್ಲಿ ನೂತನ ಮಂತ್ರಿ ಮಂಡಲ ರಚನೆ

0

ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024-25 ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆ ಮಾಡುವ ಮೂಲಕ ರಚಿಸಲಾಯಿತು.

ಶಾಲಾ ನಾಯಕಿಯಾಗಿ ಅನುಷಾ , ಉಪ ನಾಯಕರಾಗಿ ತೇಜಸ್, ಗೃಹ ಮಂತ್ರಿಯಾಗಿ ದೀವಿಕ್, ಉಪ ಗೃಹ ಮಂತ್ರಿಯಾಗಿ ಅಭಿಷೇಕ್, ಸ್ವಚ್ಚತಾ ಮಂತ್ರಿಯಾಗಿ ಫಾತಿಮತ್ ಫಾಯಿಜ, ಉಪ ಸ್ವಚ್ಚತಾ ಮಂತ್ರಿಯಾಗಿ ರಚನ್, ಶಿಕ್ಷಣ ಮಂತ್ರಿಯಾಗಿ ರಮ್ಯ ಶ್ರೀ, ಉಪ ಶಿಕ್ಷಣ ಮಂತ್ರಿಯಾಗಿ ವರ್ಷಿನಿ, ಸಾಂಸ್ಕೃತಿಕ ಮಂತ್ರಿಯಾಗಿ ಚಂದನ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಧನುಶ್ರೀ, ಆರೋಗ್ಯ ಮಂತ್ರಿಯಾಗಿ ಅನನ್ಯ, ಉಪ ಆರೋಗ್ಯ ಮಂತ್ರಿಯಾಗಿ ದಿಶಾ, ಆಹಾರ ಮಂತ್ರಿಯಾಗಿ ರೇಷ್ಮಾ, ಉಪ ಆಹಾರ ಮಂತ್ರಿಯಾಗಿ ಫಾತಿಮತ್ ರಫಾ, ಕ್ರೀಡಾ ಮಂತ್ರಿಯಾಗಿ ಪ್ರೀತಂ, ಉಪ ಕ್ರೀಡಾ ಮಂತ್ರಿಯಾಗಿ ದುರ್ಗಾಶ್ರೀ, ನೀರಾವರಿ ಮಂತ್ರಿಯಾಗಿ ಅಪೂರ್ವ, ಉಪ ನೀರಾವರಿ ಮಂತ್ರಿಯಾಗಿ ಹರ್ಷಿನಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ತೇಜಸ್, ಗಹನ್, ಲತೀಶ್, ದೃತೀಶ್, ಮಹಮ್ಮದ್ ರಾಫಿ, ಗೌತಮ್ ರಿಷಿಕ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರಾಧಿಕಾ ಕೆ.ಎಸ್ ಸಹಶಿಕ್ಷಕ ದಯಾನಂದ ಎಸ್ ಹಾಗೂ ಅತಿಥಿ ಶಿಕ್ಷಕಿ ಆಶಾ ಚುನಾವಣಾ ಕಾರ್ಯದಲ್ಲಿ ಸಹಕರಿಸಿದರು.