ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಯ ದೃಶ್ಯ
ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಯ ಪಡ್ಪಿನಂಗಡಿ ಸಮೀಪ ರಸ್ತೆ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದಾಗ ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿದ್ದು ರಸ್ತೆ ಹೊಳೆಯಂತೆ ಕಾಣುತ್ತಿದೆ.
ರಸ್ತೆಯ ಬದಿ ನಡೆದು ಹೋಗುವ ಜನರ,ವಿದ್ಯಾರ್ಥಿಗಳ ಗೋಳು ಹೇಳತೀರದು. ಸಂಬಂಧ ಪಟ್ಟ ಇಲಾಖೆಯ ಗಮನ ಹರಿಸಿ ಚರಂಡಿ ಸರಿ ಪಡಿಸ ಬೇಕಾಗಿದೆ.