ಪೆರಾಜೆ ಬಳಿ ವಿದ್ಯುತ್ ಕಂಬದಿಂದ ತಂತಿ ತುಂಡಾಗಿ ಬಿದ್ದು ಈ ರಸ್ತೆ ಮೂಲಕ ಬಂದ ವಾಹನ ಸವಾರರು ಕೂಡಲೆಳೆ ಅಂತರದಲ್ಲಿ ಪಾರಾದ ಘಟನೆ ಜೂ 28 ರಂದು ಸಂಜೆ ಸಂಭವಿಸಿದೆ.
ಪೆರಾಜೆಯಿಂದ ಕುಂಬಳ್ಚೇರಿಗೆ ಹೋಗುವ ರಸ್ತೆಯ ಬಳಿ ಇರುವ ವಿದ್ಯುತ್ ಕಂಬದಿಂದ ಏಕ ಏಕಿ ತಂತಿ ತುಂಡಾಗಿ ರಸ್ತೆಗೆ ಬಿದ್ದಿದ್ದು, ಇದೇ ವೇಳೆ ಈ ರಸ್ತೆಯ ಮೂಲಕ ಬಂದ ಆಟೋ ರಿಕ್ಷಾ ಅಲ್ಪದರಲ್ಲಿ ಪಾರಾಗಿ ಅದೇ ರೀತಿ ವಿರುದ್ಧ ದಿಕ್ಕಿನಿಂದ ಬಂದ ದ್ವಿಚಕ್ರವಾಹನಕ್ಕೆ ತಂತಿ ತಾಗುವಲ್ಲಿ ಕ್ಷಣ ಮಾತ್ರದಲ್ಲಿ ತಪ್ಪಿದೆ ಎಂದು ತಿಳಿದು ಬಂದಿದೆ.
ದಿನಾ ಮರದ ಕೊಂಬೆಗೆ ತಾಗುತ್ತಿದ್ದ ಈ ತಂತಿ ಸ್ಪಾರ್ಕ್ ಆಗಿ ಅದರ ಬಲ ಕಳೆದು ಕ್ಕೊಂಡು ಬೀಳಲು ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮಾಹಿತಿ ತಿಳಿದ ರಾಕೇಶ್ ಕುಂದಲ್ಪಾಡಿರವರು ಕೂಡಲೆ ಲೈನ್ ಮೆನ್ ಗೆ ವಿಷಯ ತಿಳಿಸಿದ್ದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಉಂಟಾಗ ಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ಇದೇ ರೀತಿ ಈ ಭಾಗದಲ್ಲಿ ಇನ್ನೂ ಹಲವಾರು ಕಡೆಗಳಲ್ಲಿ ಅಪಾಯದ ತಂತಿಗಳಿದ್ದು ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.