ಸುಳ್ಯದ ರಥಬೀದಿ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ತೇಜಾಕ್ಷಿ ನಂದಕುಮಾರ್ ಬಾರೆತ್ತಡ್ಕ ಕೋಡ್ತೀಲು ಇವರ ನೂತನ ಆಡಳಿತದೊಂದಿಗೆ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಎಜ್ಯುಕೇಶನ್ ಮೇ.10 ರಂದು ಶುಭಾರಂಭಗೊಂಡಿದ್ದು ಜೂ.30 ರಂದು ಸಂಸ್ಥೆಯಲ್ಲಿ ಗಣಹೋಮ ಮತ್ತು ಟೈಪ್ ರೈಟಿಂಗ್ ತರಗತಿ ಶುಭಾರಂಭಗೊಂಡಿತು. ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್,ಮನ್ಮಥರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದಾಸಪ್ಪ ಗೌಡ ಕೋಡ್ತಿಲು, ಚಂದ್ರ ಕೋಲ್ಚಾರ್, ನಂದಕುಮಾರ್ ಬಾರೆತ್ತಡ್ಕ, ದಾಮೋದರ ನಾರ್ಕೋಡು, ಗಂಗಾಧರ ಕೊಪ್ಪತ್ತಡ್ಕ, ದೇವಿಪ್ರಸಾದ್ ಕೊಪ್ಪತ್ತಡ್ಕ, ಸಂಜೀವ ಗೌಡ ಕೋಡ್ತಿಲು, ಸತ್ಯನಾರಾಯಣ ಅಚ್ರಪ್ಪಾಡಿ, ವಿಜಯಕುಮಾರ್ ಕುದ್ಪಾಜೆ, ಪ್ರೀತಮ್ ಕೋಡ್ತಿಲು,ಶ್ರೀಮತಿ ರುಕ್ಮಿಣಿ ಬಾರೆತ್ತಡ್ಕ, ಶ್ರೀಮತಿ ನಳಿನಿ ಮೊದಲಾದವರು ಉಪಸ್ಥಿತರಿದ್ದರು.
ಇಲ್ಲಿ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ನಲ್ಲಿ ಅನುಭವವಿರುವ ನುರಿತ ಶಿಕ್ಷಕರಿದ್ದು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ನ ಎಲ್ಲಾ ತರಹದ ಕೋರ್ಸ್ ಗಳು ಲಭ್ಯವಿದ್ದು ಎಸ್.ಎಸ್.ಲ್.ಸಿ ಆಧಾರಿತ ಪರೀಕ್ಷೆ ನಡೆಯಲಿರುವ ಸುಳ್ಯದಲ್ಲಿರುವ ಏಕೈಕ ಸಂಸ್ಥೆ ಯಾಗಿದ್ದು ಕೆ.ಎಸ್.ಇ.ಎ.ಬಿ ಯಿಂದ ಸರ್ಟಿಫಿಕೇಟ್ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.
ಸೈನ್,ಟೈಪ್ ರೈಟಿಂಗ್ ಹಾಗೂ ಎಲ್ಲಾ ತರದ ಕಂಪ್ಯೂಟರ್ ಕೋರ್ಸುಗಳು ಲಭ್ಯವಿದ್ದು ದಾಖಲಾತಿ ಆರಂಭಗೊಂಡಿರುವುದಾಗಿ ಮಾಲಕರು ತಿಳಿಸಿದ್ದಾರೆ.