ಎಂ.ಜಿ.ಎಂ. ಶಾಲಾ ಮಂತ್ರಿಮಂಡಲ ರಚನೆ

0

ಸುಳ್ಯದ ಕೊಡಿಯಾಲಬೈಲು ಮಹಾತ್ಮ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯಲ್ಲಿ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲದ ರಚನೆಯನ್ನು ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ಜುಲೈ 1ರಂದು ರಚಿಸಲಾಯಿತು.

ಶಾಲಾ ಮುಖ್ಯ ಮಂತ್ರಿಯಾಗಿ ಯಶಸ್ .ಡಿ.ಜಿ.9ನೇ ತರಗತಿ ಹಾಗೂ ಉಪಮುಖ್ಯಮಂತ್ರಿಯಾಗಿ ವಿಘ್ನೇಶ್.ಯು 8ನೇ ತರಗತಿ ಆಯ್ಕೆಯಾಗಿದ್ದಾರೆ. ಹಾಗೆಯೇ ಶಿಕ್ಷಣ ಮಂತ್ರಿಯಾಗಿ ಪ್ರಥಮ್ 9ನೇ ತರಗತಿ, ಉಪ ಶಿಕ್ಷಣ ಮಂತ್ರಿಯಾಗಿ ಸನಾ ಫಾತಿಮಾ 8ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ರಿಶಿತಾ.ಪಿ.ಬಿ 9ನೇ ತರಗತಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಸೋನಾಯ್ ಯುಗಾಶಿನಿ 6ನೇ ತರಗತಿ, ಶಿಸ್ತು ಮಂತ್ರಿಯಾಗಿ ಶಿವರಾಜ್ 9ನೇ ತರಗತಿ, ಉಪ ಶಿಸ್ತು ಮಂತ್ರಿಯಾಗಿ ಸವಿತೃ ಶರ್ಮಾ 7ನೇ ತರಗತಿ,ಶುಚಿತ್ವ ಮಂತ್ರಿಯಾಗಿ ಸೃಷ್ಠಿ 9ನೇ ತರಗತಿ, ಉಪ ಶುಚಿತ್ವ ಮಂತ್ರಿಯಾಗಿ ನಮನ್ 7ನೇ ತರಗತಿ, ಆರೋಗ್ಯ ಮಂತ್ರಿಯಾಗಿ ಮನ್ವಿತಾ 9ನೇ ತರಗತಿ, ಉಪ ಆರೋಗ್ಯ ಮಂತ್ರಿಯಾಗಿ ಸಮೃದ್ಧಿ 8ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಸುದೀಪ್ 9ನೇ ತರಗತಿ, ಉಪ ಕ್ರೀಡಾ ಮಂತ್ರಿಯಾಗಿ ಯಶಿತಾ 6ನೇ ತರಗತಿ ಹಾಗೂ ವಿರೋಧ ಪಕ್ಕದ ನಾಯಕರುಗಳಾಗಿ ಪೂರ್ವಿ ಕುರುಂಜಿ 9ನೇ ತರಗತಿ, ಧೃತಿ 9ನೇ ತರಗತಿ, ಸೂರಜ್ ವಾಗ್ಲೆ 8ನೇ ತರಗತಿ, ಅನಾಸ್ 8ನೇ ತರಗತಿ, ಮನೀಷ್ 8ನೇ ತರಗತಿ ಇವರುಗಳು ಆಯ್ಕೆಯಾಗಿದ್ದಾರೆ. ಈ ಮತದಾನ ಪ್ರಕ್ರಿಯೆಯು ಶಾಲಾ ಶಿಕ್ಷಕ ವೃಂದದವರ ಮಾರ್ಗದರ್ಶನದಲ್ಲಿ ನಡೆಯಿತು.