ಮನೆಯ ಅಂಗಳದಲ್ಲಿ ಇದ್ದ ಅಪಾಯಕಾರಿ ಬಾವಿಯನ್ನು ರಾತ್ರೋ ರಾತ್ರಿ ಮುಚ್ಚಿದ ಪುತ್ತಿಲ ಪರಿವಾರದ ಸದಸ್ಯರು

0

ಅಜ್ಜಾವರ ಗ್ರಾಮದ ಮುಳ್ಯ ಆನಂದ ಎಂಬವರ ಮನೆಯ ಅಂಗಳದಲ್ಲಿ ಇದ್ದ ಅಪಾಯಕಾರಿ ಬಾವಿಯನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಮಣ್ಣು ತುಂಬಿಸಿ ಮುಚ್ಚುವ ಕಾರ್ಯವನ್ನು ಮಾಡುವ ಮೂಲಕ ಅಸಹಾಯಕ ವ್ಯಕ್ತಿಯೊಬ್ಬರಿಗೆ ಸಹಾಯ ಹಸ್ತ ನೀಡಿದ್ದಾರೆ.

ಆನಂದ ರವರ ಮನೆಯ ಅಂಗಳದಲ್ಲಿ ಇರುವ ಬಾವಿಯಲ್ಲಿ ಇದ್ದಕ್ಕಿದ್ದಂತೆ ನೀರು ಉಕ್ಕಿ ಬಂದು ಮನೆಯ ಭಾಗದಲ್ಲಿ ಕುಸಿಯಲಾರಂಭಿಸಿತು. ಈ ಬಗ್ಗೆ ಸುದ್ದಿ ಮಾಧ್ಯಮದಲ್ಲಿ ವರದಿ ಪ್ರಕಟಗೊಂಡಿದ್ದು ಇದನ್ನು ಗಮನಿಸಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಸಂಘಟನೆಯ ಕಾರ್ಯಕರ್ತರು ಆನಂದ ರವರ ಮನೆಗೆ ಬಂದು ಧೈರ್ಯ ತುಂಬುವ ಕಾರ್ಯ ಮಾಡಿದ್ದರು. ಅದರಂತೆ
ಇದೀಗ ಮಳೆಗಾಲ ಆರಂಭಗೊಂಡ ಹಿನ್ನೆಲೆಯಲ್ಲಿ ಬಾವಿಯಲ್ಲಿ ಮತ್ತೆ ನೀರು ಹೆಚ್ಚಾಗಿ ಕುಸಿಯತೊಡಗಿದ್ದು ಮನೆಗೆ ಹಾನಿಯಾಗುವ ಸಾಧ್ಯತೆ ಇದ್ದು ಜಿಲ್ಲಾಡಳಿತದ ಆದೇಶದ ಪ್ರಕಾರ ಸ್ಥಳೀಯ ಪಂಚಾಯತ್ ವತಿಯಿಂದ ಬಾವಿಯನ್ನು ಮುಚ್ಚುವಂತೆ ಆನಂದ ರವರಿಗೆ ನೋಟಿಸ್ ನೀಡಿದ್ದರು. ಈ ಬಗ್ಗೆ ಆನಂದರವರು ಪುತ್ತಿಲ ಪರಿವಾರದ ಸದಸ್ಯರಿಗೆ ತಿಳಿಸಿದ ಮೇರೆಗೆ ನಿನ್ನೆ (ಜು.1 ರಂದು) ರಾತ್ರಿ ಪುತ್ತಿಲ ಪರಿವಾರದ ಸದಸ್ಯರಾದ ಸುಧಾಕರ ಬೆಳ್ಳೂರು ,ಪುನೀತ್ ಕುಂಚಡ್ಕ, ದಿತೇಶ್ ಕುರುಂಜಿಗುಡ್ಡೆ, ದಿನೇಶ್ ಅಡ್ಕಾರ್, ಸಾತ್ವಿಕ್ ಅರಂತೋಡು, ಪುಟ್ಟ ರವರು ಬಂದು‌ ಪುನೀತ್ ರವರ ಜೆಸಿಬಿ ಬಳಸಿಕೊಂಡು ಬಾವಿಗೆ ಮಣ್ಣು ತುಂಬಿ ಮುಚ್ಚುವ ಮೂಲಕ ಮಾನವೀಯ ಕಾರ್ಯ ನಿರ್ವಹಿಸಿದ್ದಾರೆ. ಇವರ ಈ ಕಾರ್ಯಕ್ಕೆ ಇದೀಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.