ಅಡಿಕೆ‌ ಕೃಷಿಗೆ ಹಳದಿ ರೋಗ ಬಾಧೆ: ಮನನೊಂದ ಮಡಪ್ಪಾಡಿಯ ಕೃಷಿಕ ಆತ್ಮಹತ್ಯೆ

0

ಅಡಿಕೆ ಕೃಷಿಗೆ ಹಳದಿ ರೋಗದಿಂದ ಕಂಗೆಟ್ಟ ಕೃಷಿಕರೊಬ್ಬರು ಆತ್ಮಹತ್ಯೆ ಗೆ ಶರಣಾದ ಘಟನೆ ಮಡಪ್ಪಾಡಿ ಯಿಂದ ವರದಿಯಾಗಿದೆ. ಮಡಪ್ಪಾಡಿ ಬಲ್ಕಜೆ ಸೀತಾರಾಮ ಗೌಡರು (55) ಆತ್ಮಹತ್ಯೆ ಗೆ ಶರಣಾದವರು.

ಅಡಿಕೆ ತೋಟಕ್ಕೆ ಹಳದಿ ಎಲೆ ರೋಗ ಬಾಧೆಯಿಂದ ಅಡಿಕೆ ಕೃಷಿ ಇಲ್ಲದಂತಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಗೆ ಶರಣಾಗಿರಬಹುದೆಂದು ಹೇಳಲಾಗಿದೆ. ಇಂದು ಬೆಳಗ್ಗೆ ಮನೆಯಲ್ಲಿ ವಿಷ ಸೇವಿಸಿದ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದರಾದರೂ ಫಲಕಾರಿಯಾಗದೇ ಅವರು ಮೃತಪಟ್ಟರೆಂದು ತಿಳಿದುಬಂದಿದೆ.