ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆಯ ಹಿರಿಯ ವ್ಯವಸ್ಥಾಪಕರಾಗಿ ವಿಜಯ ಎಂ ಆಗಮನ

0

ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆಯ ಹಿರಿಯ ವ್ಯವಸ್ಥಾಪಕರಾಗಿ ವಿಜಯರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಮೂಲತ: ತೆಲಂಗಾಣದ ಕಮ್ಮಾಮ್ ನವರಾದ ಇವರು, ಕಳೆದ 3 ವರುಷಗಳಿಂದ ಬೆಳ್ಳಾರೆ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿದ್ದರು.2011ರಲ್ಲಿ ವಿಜಯ ಬ್ಯಾಂಕಿಗೆ ಕರ್ತವ್ಯಕ್ಕೆ ಸೇರಿದ ಇವರು ಬಳಿಕ ಮಂಗಳೂರು, ಬಿಜಾಪುರ ತೆಲಂಗಾಣಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2020 ರಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಮುಂಬಡ್ತಿಗೊಂಡಿದ್ದರು.