ಜಟ್ಟಿಪಳ್ಳ ಪರಿಸರದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಲ್ಲದೇ ಇಪ್ಪತ್ತು ದಿನ…!

0

ಯಾರಿಗೇಳೋಣ ನಮ್ ಪ್ರಾಬ್ಲಮ್ಮ್…

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಟ್ಟಿಪಳ್ಳ ಪರಿಸರದಲ್ಲಿ ಕಲವು ಮನೆಗಳಿಗೆ ನೀರಿಲ್ಲದೇ ಸುಮಾರು ಇಪ್ಪತ್ತು ದಿನಗಳು ಕಳೆಯಿತು. ನ.ಪಂ. ಗೆ ಈ ಕುರಿತು ಮಾಹಿತಿ ನೀಡಿದರೂ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ.

ಜಟ್ಟಿಪಳ್ಳ ಶಾಲೆಯ ಮುಂಭಾಗದಲ್ಲಿ ಇರುವ ಬಹುತೇಕ ಮನೆಗಳಿಗೆ, ಕಟ್ಟೆಯಿಂದ ಕೆಳಭಾಗದ ಕೆಲವು ಮನೆಗಳಿಗೆ ಜಟ್ಟಿಪಳ್ಳ ಶಾಲೆಯ ಹಿಂಬದಿ, ಮಸೀದಿಯ‌‌ ಬಳಿ ಹೀಗೆ ಕೆಲವು ಪ್ರದೇಶದಲ್ಲಿ ನೀರು ಬಾರದೇ ಸುಮಾರು ಇಪ್ಪತ್ತು ದಿನಗಳಾಯಿತು.


ಮಳೆಗಾಲದಲ್ಲಿ ಕುಡಿಯಲು ನೀರಿಲ್ಲದೇ ಕೇಲವರು ಬೇರೆ ಬೇರೆ ಕಡೆ ತೆರಳಿ ದಿನನಿತ್ಯ ಜಟ್ಟಿಪಳ್ಳಕ್ಕೆ ಬಂದು ನೀರು ಬಂದಿದೇಯಾಂತ ನೋಡಿ ಹೋಗುತ್ತಿದ್ದಾರೆ. ಕೆಲವರು ಪಕ್ಕದ ಸರಕಾರಿ ಬಾವಿ, ಕೆಲವರು ಪಕ್ಕದಲ್ಲಿ ಇರುವಂತ ಬೋರ್ ವೆಲ್, ಬಾವಿಗಳಿಂದ ನೀರು ಪೈಪುಗಳ ಮೂಲಕ ನೀರು ತುಂಬಿಸಿ ಜೀವನ ನಡೆಸುತ್ತಿದ್ದಾರೆ. ಕೆಲವರು ಬಾಡಿಗೆ ವಾಹನಗಳಲ್ಲಿ ನೀರು ತಂದು ತಮ್ಮ ಮನೆಯ ದಿನನಿತ್ಯ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದಾರೆ.
ಎಂತ ಮಾಡುವುದು ಸಮಸ್ಯೆ ಹೇಳಿ ಪರಿಹಾರ ಕಂಡುಕೊಳ್ಳುವ ಅಂದರೆ ಸ್ಥಳೀಯ ಜನಪ್ರತಿನಿಧಿಯೇ ಇಲ್ಲ.
ಜಟ್ಟಿಪಳ್ಳ ನಿವಾಸಿಗಳು ಸಾರ್ವಜನಿಕರು ನೀರು ಇಲ್ಲ ಎರಡೂ ಮೂರು ದಿನಗಳಾಯಿತು ಯಾರಲ್ಲದರೂ ಹೇಳಿಕೊಂಡರೇ ಆಗ ರೆಡಿಯಾದ ಉತ್ತರ ಸಿಗುತ್ತದೆ. ಪಂಪ್ ಹಾಳಗಿದೆ‌ ಎರಡು ದಿನದಲ್ಲಿ ಸರಿಯಾಗಿತ್ತದೆ ಅಂತ ಉತ್ತರ ಸಿಗುತ್ತದೆ ಬಡ ಜನರು ಅದನ್ನು ನಂಬಿ ಇವತ್ತು ಸರಿಯಾಗಬಹುದು – ನಾಳೆ ಸರಿಯಾಗಬಹುದು ನಂಬಿ ಮಳೆಗಾಲ ಆದ ಕಾರಣ ಮನೆಯ ಅಂಗಳದಲ್ಲಿ ಪಾತ್ರಗಳನ್ನು ಮಾಡಿನಿಂದ ಬರುವ ನೀರನ್ನು ಶೇಖರಣೆ ಮಾಡಿ ಮನೆಯ ಇತರ ಚಟುವಟಿಕೆಗಳಿಗೆ ಸ್ಥಾನಕ್ಕೆ ಕೆಲವರು ಕುಡಿಯಲು ಉಪಯೋಗಿಸುತ್ತಾರೆ. ಏನು ಮಾಡುವುದು ಅನಿವಾರ್ಯ
ಕೆಲವು ಮನೆಗಳಲ್ಲಿ ನೀರು ಶೇಖರಣೆ ಮಾಡಿ ಇಡಲು ಹೆಚ್ಚು ಪಾತ್ರಗಳು ಇರುವುದಿಲ್ಲ. ಅದರಿಂದ ‌ಆಗಾಗ ಮಳೆ ಬರುವಾಗ ತುಂಬಿಸಿ ಅದರಿಂದ ದೈನಂದಿನ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ.
ಒಂದು ದಿನ ಮಳೆ ಬಾರದಿದ್ದರೆ ನೀರಿಗಾಗಿ ಕೊಡಪಾನ ಹಿಡಿದು ಅಲೆದಾಡುವ ಪರಿಸ್ಥಿತಿ ಸದ್ಯ‌ ಜಟ್ಟಿಪಳ್ಳ ಪರಿಸರದಲ್ಲಿ ಕಾಣುತ್ತಿದೆ.

ಏನಿದು ಸಮಸ್ಯೆ ಹಿಂದೆ
ಇತ್ತೀಚೆಗೆ ಬೇಸಿಗೆ ಕಾಲದಲ್ಲಿ ಸುಳ್ಯ ‌ನಗರದದ್ಯಾಂತ ಬಹು ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಹೊಸ ಪೈಪ್ ಲೈನ್ ಅಳವಡಿಸುವ ಸಲುವಾಗಿ ಎಲ್ಲಾ ರಸ್ತೆಯಲ್ಲಿ ಕಡಿದು ಹೊಂಡಮಾಡಿ ಪೈಪ್ ಲೈನ್ ಅಳವಡಿಸಲಾಗಿದೆ.
ಪೈಪ್ ಅಳವಡಿಸುವ ಸಂದರ್ಭದಲ್ಲಿ ಬಹುತೇಕ ಕಡೆಗಳಲ್ಲಿ ಮೊದಲೇ ಇದ್ದ ಪೈಪ್ ಗಳು ತುಂಡಾಗಿದ್ದು ಅದನ್ನು ಪೈಪ್ ಲೈನ್ ಗಾಗಿ ಕಣಿ ಮಾಡಿದವರೇ ಸಿಕ್ಕಿಸಿಕೊಟ್ಟಿದ್ದಾರೆ.
ಕೆಲವು ಕಡೆ ತುಂಡಾದ ಪೈಪುಗಳ ಒಳಗೆ ಮಣ್ಣು ತುಂಬಿದೆ ಕೆಲವು ಕಡೆ ಬಲಕ್ಕೆ ಸಿಕ್ಕಿಸಬೇಕಾದ ಪೈಪನ್ನು ಎಡಕ್ಕೆ ಸಿಕ್ಕಿಸಿದ್ದಾರೆ. ಕೆಲವು ಕಡೆ ಎಡಕ್ಕೆ ಸಿಕ್ಕಿಸಬೇಕಾದ ಪೈಪ್ ಗಳನ್ನು ಬಲಕ್ಕೆ ‌ಸಿಕ್ಕಿಸಿದ್ದಾರೆ. ಕೆಲವು ಕಡೆ ಅರ್ಧಂಬರ್ಧ ಕೆಲಸ ಮಾಡಿ ಅಗೆಯುವಾಗ ಒಟ್ಟೆಯಾದ ಚರಂಡಿ ಪೈಪುಗಳು ಮತ್ತು ನೀರಿನ ಪೈಪ್ ಗಳನ್ನು ರೀಪೆರಿ ಮಾಡದೇ ಖಾಲಿ ಸಿಮೆಂಟ್ ಚೀಲ ಇಟ್ಟು ಮಣ್ಣು ಹಾಕಿ ಹೋಗಿದ್ದಾರೆ.
ಅದಲ್ಲದೇ ಕಾಂಕ್ರೀಟ್ ರಸ್ತೆಯನ್ನು ತುಂಡರಿಸಿ ಪೈಪ್ ಅಳವಡಿಸಿ ಅದನ್ನು ಸರಿಯಾಗಿ ಮುಚ್ಚದೆ ವಾಹನ ಸವಾರರಿಗೆ ವಾಹನ ಚಲಾಯಿಸಿಕೊಂಡು ಹೋಗಬೇಕಾದರೆ ಪಕ್ಕದ ಗ್ಯಾರೇಜುಗಳನ್ನು ನೆನಪಾಗುತ್ತದೆ.
ಈಗ ಮಳೆ ಶುರುವಾಗಿ ಒಂದು ತಿಂಗಳಾಯಿತು. ಅದರೂ ಜಟ್ಟಿಪಳ್ಳ ಪರಿಸರ ಒಂದು ಚರಂಡಿಯಲ್ಲಿ ನೀರು ಹರಿಯುವುದಿಲ್ಲ. ಎಲ್ಲಾ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಯಾಕೆಂದರೆ ಮಳೆಗಾಲ ಆರಂಭವಾಗುವಾಗ ಎಲ್ಲಾ ಚರಂಡಿಗಳನ್ನು ದುರಸ್ಥಿಪಡಿಸಿ ಮಳೆಯ ನೀರನ್ನು ಚರಂಡಿಯಲ್ಲಿ ಹೋಗುವ ಹಾಗೆ ನಗರ ಪಂಚಾಯತ್ ವತಿಯಿಂದ ಮಾಡುತ್ತಿದ್ದರು. ಜಟ್ಟಿಪಳ್ಳ ಪರಿಸರದಲ್ಲಿ ಒಂದು ಹಾರೆ ಮಣ್ಣನ್ನು ತೆಗೆಯುವ ಕೆಲಸ ಇದುವರೆಗೂ ಆಗಲಿಲ್ಲ. ಒಟ್ಟಿನಲ್ಲಿ ಜಟ್ಟಿಪಳ್ಳದ ಜನರ ಸಮಸ್ಯೆ ಯಾರಲ್ಲಿ‌ ಹೇಳಬೇಕು ಯಾರಲ್ಲಿ ಹೇಳಿದರೆ ಪರಿಹಾರ ಸಿಗಬಹುದೆಂದು ಉತ್ತರ ಸಿಗದ ಪ್ರಶ್ನೆ ಯಾಗಿದೆ.

ಪಕ್ಕದ ವಾರ್ಡ್ ಸದಸ್ಯರಿಂದ ‌ಕುಡಿಯುವ ನೀರಿನ‌ ಸಮಸ್ಯೆಗೆ ಪರಿಹಾರಕ್ಕಾಗಿ ‌ಪ್ರಯತ್ನ

ಜಟ್ಟಿಪಳ್ಳ ವಾರ್ಡ್‌ನ ಪಕ್ಕದ ವಾರ್ಡ್ ಬೋರುಗುಡ್ಡೆ ವಾರ್ಡ್ ಬೊರುಗುಡ್ಡೆ ವಾರ್ಡ್ ನಲ್ಲೂ ನೀರಿನ ಸಮಸ್ಯೆ ಉದ್ಭವವಾಗಿದೆ. ಅಲ್ಲಿಯ ಸದಸ್ಯರಾದ ಉಮ್ಮರ್ ಕೆ ಎಸ್ ರವರು ನಗರ ಪಂಚಾಯತ್ ನ ನೀರಿನ ಪೈಪ್ ಲೈನ್ ದುರಸ್ತಿಗೆ ಸಂಬಂಧಿಸಿದ ಕೆಲಸದವರನ್ನು ಕರೆದುಕೊಂಡು ಹೋಗಿ ಸತತ ಹತ್ತು ದಿನಗಳಿಂದ ನಿರಂತರ ಕಣಿಗಳನ್ನು ಅಗೆದು ಪೈಪುಗಳು‌ ಎಲ್ಲಿ ಬ್ಲಾಕ್ ಆಗಿದೆ ಎಲ್ಲಿ‌ ಸಮಸ್ಯೆಯಾಗಿದೆ ಅಂತ ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತಿದ್ದಾರೆ. ಬೋರುಗುಡ್ಡೆ ವ್ಯಾಪ್ತಿಯಲ್ಲಿ ಸ್ವಲ್ಪ ನೀರಿನ ಸಮಸ್ಯೆ ಸುಧಾರಣೆ ಆಗಿದೆ. ಆದರೂ ಜಟ್ಟಿಪಳ್ಳ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳಲು ನಗರ ಪಂಚಾಯತ್ ಸಿಬ್ಬಂದಿಗಳ ಜೊತೆಯಲ್ಲಿ ಮಾರ್ಗದರ್ಶನ ‌ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಜಟ್ಟಿಪಳ್ಳ ವಾರ್ಡ್ ನ ಜನರ ಸಮಸ್ಯೆ ಸ್ಪಂದಿಸುವವರು ಯಾರಾದರೂ ಇದ್ದಾರಾ ?
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಜಟ್ಟಿಪಳ್ಳದ ಸ್ವಲ್ಪ ಗಮಹರಿಸಬೇಕಾಗುತ್ತದೆ.