ಸುಳ್ಯ‌ ಗಾಂಧಿನಗರ ಕೆ.ಪಿ.ಎಸ್. ಕಾಂಪೌಂಡ್ ರಸ್ತೆಯತ್ತ ವಾಲಿ ನಿಂತಿದೆ

0

ಈ ರಸ್ತೆಯಲ್ಲಿ ನೂರಾರು‌ ಮಕ್ಕಳ ಪ್ರತೀ ದಿನ ಸಂಚಾರ : 20 ಮೀಟರ್ ದುರಸ್ತಿ ಆಗದಿದ್ದರೆ ಅಪಾಯ ಗ್ಯಾರಂಟಿ

ಸುಳ್ಯದಲ್ಲಿ ನೂರಾರು ಮಕ್ಕಳು ಓದುವ ಗಾಂಧಿನಗರ ಕೆಪಿಎಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದ‌ ಕಾಂಪೌಂಡ್ ಮುಖ್ಯ ರಸ್ತೆಗೆ ವಾಲಿ‌ ನಿಂತಿದೆ.

ವಿದ್ಯಾಸಂಸ್ಥೆಯ ಕ್ರೀಡಾಂಗಣಕ್ಕೆ 2012-13ರಲ್ಲಿ ಸರ್ವ ಶಿಕ್ಷಣ ಅಭಿಯೋಜನೆಯಡಿ 175 ಮೀ ಕಾಂಪೌಂಡ್ ‌ಮಾಡಲಾಗಿದೆ. ಆದರೆ ಇದೀಗ ಆ ಕಾಂಪೌಂಡ್ ಒಂದು ಕಡೆ ಮುಖ್ಯ ರಸ್ತೆಗೆ ವಾಲಿ ನಿಂತಿದ್ದು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಆ ಕಾಂಪೌಂಡ್ ನ ಪಕ್ಕದಲ್ಲೇ ನೂರಾರು ‌ಮಕ್ಕಳು ಪ್ರತೀ ನಿತ್ಯ‌ ನಡೆದುಕೊಂಡು ಹೋಗುತಿದ್ದು, ವಾಲಿದ ಕಾಂಪೌಂಡ್ ತೆರವು ಮಾಡದಿದ್ದರೆ ಅಪಾಯ ಗ್ಯಾರಂಟಿ.
ಆದ್ದರಿಂದ ಸಂಬಂಧ ಪಟ್ಟ ಇಲಾಖೆ ಈ ಕುರಿತು ಗಮನ ಹರಿಸಬೇಕಾಗಿದೆ.

“ರಸ್ತೆಯ ಪುಟ್ ಪಾತ್ ಕಾಂಪೌಂಡ್ ಗೆ ತಾಗಿರುವುದರಿಂದ ಪ್ರತೀ ನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕ ರು ಪುಟ್ ಪಾತ್ ನಲ್ಲಿ ನಡೆಯುತ್ತಿದ್ದಾರೆ.‌ ಕಾಂಪೌಂಡ್ ವಾಲಿ ನಿಂತಿದ್ದು ಬೀಳುವ ಸ್ಥಿತಿಯಲ್ಲಿದೆ” ಎಂದು ‌ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ತಿಳಿಸಿದ್ದಾರೆ.