ಆದರೂ ಪೋಷಕರ ಒತ್ತಾಯದ ಮೇರೆಗೆ ತೆರವಿಗೆ ಕ್ರಮ : ನ.ಪಂ. ಸದಸ್ಯ ಶರೀಫ್ ಕಂಠಿ
ಸುಳ್ಯ ಗಾಂಧಿನಗರ ಕೆಪಿಎಸ್ ಶಾಲಾ ಕ್ರೀಡಾಂಗಣದ ಕಾಂಪೌಂಡ್ ವಾಲಿರುವ ವಿಚಾರ ಇತ್ತೀಚೆಗೆ ಶಾಲಾ ಎಸ್.ಡಿ.ಎಂ.ಸಿ. ಸಭೆಯಲ್ಲಿ ಪ್ರಸ್ತಾಪವಾಗಿ, ಇಂಜಿನಿಯರ್ ಮೂಲಕ ಪರೀಶನೆ ನಡೆಸಿದ್ದು ಕಾಂಪೌಂಡ್ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. ಆದರೂ ಪೋಷಕರ ಒತ್ತಾಯದ ಮೇರೆಗೆ ಅದನ್ನು ತೆರವು ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ನ.ಪಂ. ಸದಸ್ಯ ಶರೀಫ್ ಕಂಠಿ ಸುದ್ದಿಗೆ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ಕೆಪಿಎಸ್ ಗಾಂಧಿನಗರ ಶಾಲಾ ಕ್ರೀಡಾಂಗಣ ವಾಲಿರುವ ಕುರಿತು ಹಾಗೂ ಅಪಾಯ ಸಂಭವಿಸಬಹುದಾದ ಮುನ್ನೆಚ್ಚರಿಕೆ ಕುರಿತು ವರದಿ ಪ್ರಕಟಿಸಲಾಗಿತ್ತು. ಈ ವರದಿಯನ್ನು ನೋಡಿದ ಶರೀಫ್ ಕಂಠಿಯವರು ಸುದ್ದಿಯನ್ನು ಸಂಪರ್ಕಿಸಿ, ಶಾಲಾ ಕ್ರೀಡಾಂಗಣದ ಕಾಂಪೌಂಡ್ ವಾಲಿರುವ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ನಾವು ಖಾಸಗಿ ಇಂಜಿನಿಯರ್ ಮೂಲಕ ಪರಿಶೀಲನೆ ನಡೆಸಿದೆವು. ಅದು ಗಟ್ಟಿಯಾಗಿದೆ. ಮತ್ತು ಪಕ್ಕದಲ್ಲಿರುವ ಮರದ ಬೇರು ಅದನ್ನು ದೂಡಿ ಕೊಟ್ಟಿದೆಯಷ್ಟೆ. ಬೀಳುವುದಿಲ್ಲ ಎಂದು ಹೇಳಿದ್ದಾರೆ. ಆದರೂ ಎಸ್.ಡಿ.ಎಂ.ಸಿ. ಸಭೆಯಲ್ಲಿ ಪೋಷಕರು ಆತಂಕ ವ್ಯಕ್ತ ಪಡಿಸಿದ್ದರಿಂದ ನಾನು ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷ ಚಿದಾನಂದರು ಬಳಿಕ ಬಿ.ಇ.ಒ. ರಿಗೆ ಮಾಹಿತಿ ನೀಡಿದ್ದೇವೆ. ಮತ್ತು ತಹಶೀಲ್ದಾರ್ ರಿಗೆ ಮನವಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.