ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ರಸ್ತೆ ಅಭಿವೃದ್ಧಿ ಪಡಿಸಿ

0

ನ.ಪಂ. ಮುಖ್ಯಾಧಿಕಾರಿಗಳಿಗೆ ಮನವಿ

ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್‌ ನಿಲ್ದಾಣದ ಮುಂಭಾಗದಿಂದ ಹಾದುಹೋಗಿ ಸಂತೋಷ್ ಧಿಯೇಟರ್ ಬಳಿ ಸೇರುವ ರಸ್ತೆಯ ಎದುರು ಕಾಮಗಾರಿಗೆ ಬಾಕಿ ಇರುವ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಆ ರಸ್ತೆಯ ಫಲಾನುಭವಿಗಳಾದ ಇಬ್ರಾಹಿಂ ಬಿಗ್ 4 ಟೈಲ್ಸ್, ನಿವೃತ್ತ ಎ.ಎಸ್.ಐ. ಚಂದಪ್ಪ ಗೌಡ, ಹಾಗೂ ಚಂದ್ರಶೇಖರ ಚೋಡಿಪಣೆ ಸುಳ್ಯ ನ.ಪಂ. ಮುಖ್ಯಾಧಿಕಾರಿ ಸುಧಾಕರ್ ರಿಗೆ ಜು.3ರಂದು ಮನವಿ ಸಲ್ಲಿಸಿದ್ದಾರೆ.

ಸುಳ್ಯದ ಹೃದಯಭಾಗ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದಿಂದ ಹಾದುಹೋಗಿ ಸಂತೋಷ್ ಥಿಯೇಟರ್ ಬಳಿ ಸೇರಿಕೊಳ್ಳುವ ನಾವೂರು ರಸ್ತೆಯು ಸುಮಾರು 1.5 ಕಿ.ಮೀ. ಉದ್ದವಿದ್ದು ಈ ಪೈಕಿ ಬಹುತೇಕ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದರೂ ಸುಳ್ಯ KSRTC ಬಸ್‌ನಿಲ್ದಾಣದ ಎದುರುಗಡೆ ಸುಮಾರು 80 ಮೀಟರ್ ರಸ್ತೆಯು ಕಾಮಗಾರಿಯಾಗದೆ ಬಾಕಿ ಉಳಿದಿದ್ದು ಆ ಭಾಗದ ರಸ್ತೆಯು ಮಳೆನೀರು ಹರಿದು ಹೊಂಡಗುಂಡಿಗಳಿಂದ ಕೂಡಿದ್ದು ಈ ರಸ್ತೆಯಲ್ಲಿ ವಾಹನಗಳ ಓಡಾಟ ಕ್ಕೆ ಬಹಳ ಕಷ್ಟಕರವಾಗಿರುವುದಲ್ಲದೆ ನಡೆದಾಡುವ ನಾಗರಿಕರು ತುಂಬಾ ತೊಂದರೆ ಅನುಭವಿಸುತ್ತಿರುತ್ತಾರೆ,

ಈ ರಸ್ತೆ ಮುಖೇನ ನಾವೂರುನಲ್ಲಿರುವ Greenview ವಿದ್ಯಾಸಂಸ್ಥೆ ಗೆ, ಶಾರಾದ Tutorial ವಿದ್ಯಾಸಂಸ್ಥೆ ಗೆ ಮತ್ತು ಗಾಂಧಿನಗರ ಸರಕಾರಿ ವಿದ್ಯಾಸಂಸ್ಥೆ ಗೆ ಬಸ್ಸು ಮುಖೇನಾ ಬರುವ ಬಹುತೇಕ ವಿದ್ಯಾರ್ಥಿಗಳು ಓಡಾಟ ಮಾಡುತ್ತಿರುತ್ತಾರೆ. ಅದರಂತೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳ ಓಡಾಟದ ಹೊರತಾಗಿ ಕಲ್ಯಾಣ ಮಂಟಪಕ್ಕೆ ಹೋಗಿ ಬರುವ ಕಾರ್ಯಕ್ರಮ ನಿಮಿತ್ತ ಜನರು ಇದೇ ರಸ್ತೆ ಮುಖೇನಾ ತಮ್ಮ ವಾಹನಗಳನ್ನು ಚಲಾಯಿಸುತ್ತಿರುವುದಲ್ಲದೆ ಈ ರಸ್ತೆಯನ್ನು ಅವಲಂಭಿತವಾಗಿ ಸುಮಾರು 30ರಷ್ಟು ಮನೆಗಳು ಇದ್ದು ಈ ಪೈಕಿ ನಿವೃತ್ತ ಸೇನಾ ನೌಕರರು, ನಿವೃತ್ತ ಅಧಿಕಾರಿ ವರ್ಗದ ಹಿರಿಯ ನಾಗರಿಕರು ವಾಸ್ತವ್ಯವಿದ್ದು ಈ ರಸ್ತೆಯ ಮೂಲಕ ಓಡಾ ಮಾಡುವ ಅನಿವಾರ್ಯತೆ ಇದೆ. ಇದರ ಹೊರತ್ತಾಗಿ ಬಸ್ಸು ನಿಲ್ಯಾಣದಿಂದ ಗಾಂಧಿನಗರದ ತನಕ ಮುಖ್ಯ ರಸ್ತೆಯು ಅನಿವಾರ್ಯ ಸಂದರ್ಭದಲ್ಲಿ ವಾಹನಗಳ ಒಡಾಟಕ್ಕೆ ಅಡ್ಡಿಯಾಗುವ (ಸಮಯ ಈ ರಸ್ತೆಯು ವಾಹನಗಳ ಸಂಚಾರಕ್ಕೆ ಬಹುಮುಖ್ಯ ರಸ್ತೆಯು ಆಗಿರುತ್ತದೆ ಈ ಮಾರ್ಗದ ಮುಂಭಾಗದಲ್ಲಿ ಹೊಸ ಕಾಂಪ್ಲೆಕ್ಸ್ ನಿರ್ಮಾಣವಾಗಿದ್ದು ಆ ಕಾಂಪ್ಲೆಕ್ಸ್‌ನ ವಾಹನ ನಿಲುಗಡೆ ಕಾಮಗಾರಿಯು ಪೂರ್ಣಗೊಳ್ಳದೇ ಅಲ್ಲಿಗೆ ಬರುವಂತ ವಾಹನಗಳು ಮತ್ತು ಅಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ವರ್ಗದವರ ವಾಹನಗಳನ್ನು ಈ ಮಾರ್ಗದ ಬದಿಯಲ್ಲಿಯೇ ನಿಲುಗಡೆ ಮಾಡಿರುವುದರಿಂದ ನಾಗರಿಕರು, ಮಕ್ಕಳಿಗೆ ನಡೆದಾಡಲು ಕಷ್ಟಕರವಾಗಿದೆ.

ಆದ್ದರಿಂದ ಬಾಕಿ ಇರುವ ರಸ್ತೆಯು ಕಾಂಕ್ರೀಟೀಕರಣಗೊಂಡು ಕಾಮಗಾರಿಯು ಪೂರ್ಣ ಗೊಂಡಲ್ಲಿ ಈ ರಸ್ತೆಯಲ್ಲಿ ಒಡಾಡುವ ವಾಹನಗಳ ಸಂಂಚಾರಕ್ಕೆ ನಾಗರಿಕರಿಗೆ ಹಾಗೂ ಶಾಲಾ ಮಕ್ಕಳ ಓಡಾಟ ಕ್ಕೆ ತುಂಬಾ ಅನುಕೂಲಕರವಾಗಲಿದೆ. ಈ ಸಮಸ್ಯೆಯನ್ನು ನಗರ ವಂಚಾಯತ್ ಸದಸ್ಯರಾದ ಉಮ್ಮರ್ ಅವರ ಗಮನಕ್ಕೆ ತರುವ ಮುಖೇನಾ ಅವರ ಮೂಲಕ ನ.ಪಂ.ಗೆ ಮನವಿ ಮಾಡಿಕೊಳ್ಳುವುದನೆಂದರೆ ತಾವು ದಯಮಾಡಿ ಸ್ಥಳ ಪರಿಶೀಲನೆ ಮಾಡಿ ಅಗತ್ಯಕ್ರಮಗಳನ್ನು ಕೈಗೊಂಡು ಈ ಭಾಗದ ಜನರ ಹಾಗೂ ಒಡಾಟ ನಡೆಸುವ ನಾಗರಿಕರ ಸಮಸ್ಯೆಗೆ ಸಂಪೂರ್ಣ ಪರಿಹಾರ ಒದಗಿಸುವರೆಂದು ನಂಬುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

,