ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಕಾಯರ್ತಡ್ಕ ಶಾಲೆಗೆ ನೋಟ್ ಪುಸ್ತಕ ವಿತರಣೆ

0

ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಯರ್ತಡ್ಕ ಇಲ್ಲಿನ ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.


ರೋಟರಿ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ ರೈ ಕೊಡುಗೆಯಾಗಿ ನೀಡಿದರು.


ಈ ಸಂರ್ಭದಲ್ಲಿ ಕ್ಲಬ್ ಅಧ್ಯಕ್ಷರಾದ ರೊ. ಚಂದ್ರಶೇಖರ ರೈ ,ಕಾರ್ಯದರ್ಶಿ ರೊ. ಎ. ಕೆ ಮಣಿಯಾಣಿ, ಎ. ಜಿ .ರೊ ವಿನಯಕುಮಾರ್, ಐ. ಪಿ. ಪಿ. ರೊ ಶಶಿಧರ ಬಿ.ಕೆ , ರೊ ಪ್ರಭಾಕರ ಆಳ್ವ ,ಪೂರ್ವಾಧ್ಯಕ್ಷರಾದ ರೊ. ರವೀಂದ್ರ ಗೌಡ , ರೊ. ನವೀನ್ ರೈ , ರೊ. ಬಾಲಕೃಷ್ಣ ಮಡ್ತಿಲ ಉಪಸ್ಧಿತರಿದ್ದರು.