ಶ್ರೀಮತಿ ಕಮಲ ಕಂಬಳಿಮೂಲೆ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ದಿ.ಪಕೀರ ಪಾಟಾಳಿಯವರ ಪತ್ನಿ ಶ್ರೀಮತಿ ಕಮಲ ರವರು ಜು.4 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 80 ವರ್ಷ ವಯಸ್ಸಾಗಿತ್ತು.

ಇವರು ಉಬರಡ್ಕ ಅಂಗನವಾಡಿ ಕೇಂದ್ರದಲ್ಲಿ ಸುಮಾರು 30 ವರ್ಷಗಳ ಕಾಲ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.


ಮೃತರು ಪುತ್ರರಾದ ಉಬರಡ್ಕ ಪಂಚಾಯತ್ ಸಿಬ್ಬಂದಿ ಜನಾರ್ದನ, ಆನಂದ, ಮನಮೋಹನ, ಪುತ್ರಿಯರಾದ ಲೀಲಾವತಿ, ಭವಾನಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.