ಮತ್ತೆ ಪಂಜ ಕಾಲೇಜಿನ ಬಾಗಿಲು ಮುರಿದು ಫ್ಯೂಸ್ ಕಳ್ಳತನ

0


ಒಂದೇ ಕಾಲೇಜಿನಲ್ಲಿ ಎರಡು ದಿನ ಕಳ್ಳತನ!

ಜು.4 ರಂದು ರಾತ್ರಿ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳ್ಳತನ, ಕಿಟಕಿ ಗಾಜು ಒಡೆದ ಪ್ರಕರಣ ನಡೆದಿತ್ತು .ಈ ವಿಷಯ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದರೂ ತನಿಖೆಗೆ ಪೋಲೀಸರು ಆಗಮಿಸಿರಲಿಲ್ಲ. ಜು.5 ರಂದು ರಾತ್ರಿ ಮತ್ತೆ ಕಳ್ಳರು ಕಾಲೇಜು ಕೊಠಾಡಿ ಬಾಗಿಲಿನ ಹಲಗೆ ಮುರಿದಿರುವುದು ,ಹೊಸದಾಗಿ ಹಾಕಿದ ಫ್ಯೂಸ್ ಕದ್ದಿರುವುದು ಬೆಳಕಿಗೆ ಬಂದಿದೆ.

ಜು.4 ರಂದು ನಡೆದ ಪ್ರಕರಣ :

ಜು.4 ರಂದು ರಾತ್ರಿ ಪುತ್ಯ ಎಂಬಲ್ಲಿ ಇಂತದೇ ಒಂದು ಪ್ರಕರಣ ನಡೆದಿತ್ತು. ಇದರ ಬೆನ್ನಲ್ಲೇ ಮತ್ತೊಂದು ಪಂಜ ಕಾಲೇಜಿನ ಪ್ರಕರಣ ಬೆಳಕಿಗೆ ಬಂದಿತ್ತು.

ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ಜು.4 ರಂದು ರಾತ್ರಿ ಕಿಟಕಿ ಗಾಜು ಒಡೆದಿರುವುದು ಮತ್ತು ಪ್ಯೂಸ್, ಕೇಬಲ್ ಕಳ್ಳತನ ನಡೆದಿದೆ.
ಪಿ.ಯು.ಕಾಲೇಜಿನಲ್ಲಿ ಕಿಟಕಿ ಗಾಜು ಒಡೆದಿದ್ದು ಮತ್ತು ಅಲ್ಲೇ ಸಮೀಪದಲ್ಲಿರುವ ಹೈಸ್ಕೂಲ್ ಕಟ್ಟದಲ್ಲಿರುವ ಸುಮಾರು 9 ವಿದ್ಯುತ್ ಫ್ಯೂಸ್, ಇಂಟರ್ನೆಟ್ ಕೆಬಲ್ ಕಳ್ಳತನ ವಾಗಿದೆ. ಕಾಲೇಜು ಜಗುಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಈ ಕುರಿತು ಸುಬ್ರಹ್ಮಣ್ಯ ಪೋಲೀಸರಿಗೆ ತಿಳಿಸಲಾಗಿತ್ತು. ಜು.4 ರಂದು ರಾತ್ರಿ ಪಂಜ ಸಮೀಪ ಪುತ್ಯ ಬಸ್ ತಂಗುದಾಣದಲ್ಲಿ ಅಳವಡಿಸಿರುವ ಮೂರು ಸ್ಟೀಲ್ ಪೈಪ್ ಗಳನ್ನು ಒಡೆದು ತೆಗೆದ ರೀತಿಯಲ್ಲಿ ಪತ್ತೆಯಾಗಿದೆ. ನಿರಂತರ ಕಳ್ಳತನದಿಂದ ಪಂಜದಲ್ಲಿ ಜನರಲ್ಲಿ ಭಯ‌ ಹುಟ್ಟಿಸಿದೆ.