ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಇಂದು ಸಂಜೆ ನೂತನ ಚೌಕಾಂಗಣ ದಲ್ಲಿ ನಡೆಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾoಶುಪಾಲರು ಹಾಗೂ ಸಂಸ್ಥೆಯ ಸಂಚಾಲಕರಾದ ಶ್ರೀ ಕೆ ಆರ್ ಗಂಗಾಧರ್ ರವರು ದೀಪ ಪ್ರಜ್ವನ ಗೊಳಿಸಿ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿದರು.
ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳುವುದರ ಜೊತೆಗೆ ಸಂಸ್ಥೆಯಿಂದ ಹೊರಹೋಗುವಾಗ ಸಮಾಜ ‘ಇವನೊಬ್ಬ ಒಳ್ಳೆಯ ವಿದ್ಯಾರ್ಥಿ’ ಎಂದು ಗುರುತಿಸುವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.
ಹದಿ ಹರೆಯದಲ್ಲಿ ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳದೆ, ಕುಲುಷಿತ ಸಮಾಜದ ಪ್ರಭಾವಗಳಿಗೆ ಬಲಿಯಾಗದೆ ಶಿಕ್ಷಣ ಪಡೆದು ಸ್ವಂತಿಕೆಯಿಂದ ದೇಶದ ಸತ್ಪ್ರಜೆಯಾದರೆ ಅದು ಈ ಸಂಸ್ಥೆಗೆ ನೀಡುವ ಕೊಡುಗೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಲೇಜು ಹಾಗೂ ಪ್ರೌಢ ಶಾಲೆಯ ನಾಯಕ, ಉಪನಾಯಕ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಪ್ರಭಾರ ಪ್ರಾoಶುಪಾಲರಾದ ಶ್ರೀ ಸುರೇಶ್ ವಾಗ್ಲೇ ಪ್ರಮಾಣ ವಚನ ಬೋಧಿಸಿ ಸದರಿ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಸರಕಾರದ ಜವಾಬ್ದಾರಿಗಳನ್ನು ತಿಳಿಸಿದರು. ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಎಂ ಕೆ ಸೀತಾರಾಮ್ ರವರು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಇತಿಹಾಸ ಉಪನ್ಯಾಸಕರಾದ ಶ್ರೀ ಮೋಹನಚಂದ್ರ ರವರು ಕಾರ್ಯಕ್ರಮ ನಿರೂಪಿಸಿದರು. ಚುನಾವಣೆ ಅಧಿಕಾರಿಗಳಾಗಿ ಶ್ರೀ ಪದ್ಮಕುಮಾರ್ ಹಾಗೂ ಕಿಶೋರ್ ಕುಮಾರ್ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿದರು.