ಬೆಳ್ಳಾರೆ ಡೆಂಗ್ಯೂ ಮತ್ತು ಕ್ಷಯ ರೋಗ ಜಾಗೃತಿ ಹಾಗೂ ಸ್ವಚ್ಚತಾ ಕಾರ್ಯಕ್ರಮ

0


ಜೇಸಿಐ ಬೆಳ್ಳಾರೆ ಆಶ್ರಯದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಜ್ಞಾನದೀಪ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್ ಬೆಳ್ಳಾರೆ ಮತ್ತು ಗ್ರಾಮ ಪಂಚಾಯತ್ ಬೆಳ್ಳಾರೆ ಸಹ ಡೆಂಗ್ಯೂ ಮತ್ತು ಕ್ಷಯರೋಗ ಮಾಹಿತಿ,ಡ್ರೈಡೇ ಹಾಗೂ ಸ್ವಚ್ಛತಾ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ ಉದ್ಘಾಟಿಸಿದರು. ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ್ ಸಿ ಡೆಂಗ್ಯೂ ಜ್ವರ ಮತ್ತು ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಕ್ಷಯರೋಗ ನಿಯಂತ್ರಣ ಘಟಕದ ಅಧಿಕಾರಿ ಲೋಕೇಶ್ ತಂಟೆಪ್ಪಾಡಿ ಕ್ಷಯರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಅರೋಗ್ಯ ಕೇಂದ್ರದ ಹಿರಿಯ ಶುಶ್ರೂಶಕಿ ಬೇಬಿ, ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ದೇಶಕ ಲೋಕೇಶ್ ತಂಟೆಪ್ಪಾಡಿ ವಂದಿಸಿದರು.ಬೆಳ್ಳಾರೆ ಜೇಸಿ ಪೂರ್ವಧ್ಯಕ್ಷ ಪ್ರೀತಮ್ ರೈ, ಯಹಿಯಾ ಬೆಳ್ಳಾರೆ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಶಾ ಕಾರ್ಯಕರ್ತೆಯರು, ಬೆಳ್ಳಾರೆ ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿಗಳು, ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಜೇಸಿ ಸದಸ್ಯರು ಬೆಳ್ಳಾರೆ ಪೇಟೆಯಲ್ಲಿ ಸ್ವಚ್ಛತೆ ಮಾಡುವ ಮೂಲಕ ಡೆಂಗ್ಯೂ ಜಾಗೃತಿಯ ಕರಪತ್ರ ಹಂಚಿದರು.