ಅರಂತೋಡು ಮದರಸದಲ್ಲಿ ಮುಅಲ್ಲಿಂ ಡೇ

0

ನುಸ್ರತ್ತುಲ್ ಇಸ್ಲಾಂ ಮದರಸ ಅರಂತೋಡು ಎಸ್ ಕೆ ಎಸ್ ಬಿ ವಿ ವತಿಯಿಂದ ಮುಅಲ್ಲಿಂ ಡೇಯನ್ನು ಜುಲೈ 7ರಂದು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಜಮಾತ್ ನ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದ್ದರು. ಕಾರ್ಯಕ್ರಮವನ್ನು ಖತೀಬರಾದ ಇಸ್ಮಾಯಿಲ್ ಪೈಝಿ ಗಟ್ಟಮನೆ ಉದ್ಘಾಟಿಸಿ ಅತ್ಯಲ್ಪ ವೇತನದಲ್ಲಿ ದುಡಿಯುತ್ತಿರುವ ಮದರಸ ಅಧ್ಯಾಪಕರು ಸಮಾಜದಲ್ಲಿ ಯೋಗ್ಯ ಮನುಷ್ಯನಾಗಿಸುವ ಶಿಕ್ಷಣವನ್ನು ನೀಡುತ್ತಿದ್ದಾರೆ. ಅರಂತೋಡು ಮದರಸದಲ್ಲಿ ಡಾ| ಶಾಹ್ ಮುಸ್ಲಿಯಾರ್ ನಂತಹ ಅನೇಕ ಮಹನೀಯರು ಸೇವೆ ಸಲ್ಲಿಸಿದ್ದಾರೆ. ಅವರ ಆದರ್ಶ ಇಂದಿಗೂ ಅಮರ ವಾಗಿದೆ ಎಂದರು.


ಸದರ್ ನೌಶಾದ್ ಅಝ್ ಹರಿ, ಸಹಾಯಕ ಅಧ್ಯಾಪಕ ಆಶ್ರಫ್ ಮುಸ್ಲಿಯಾರ್, ಅನ್ವಾರ್ರುಲ್ ಹುದಾಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಜೀದ್, ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ನಿವೃತ್ತ ಉಪನ್ಯಾಸಕ ಅಬ್ದುಲ್ಲ ಮಾಸ್ತರ್ ಹಾಗೂ ವಿದ್ಯಾರ್ಥಿಗಳ ಪರವಾಗಿ ಅಫ್ಸಲ್, ಅಫೀಝ್, ಅಕ್ಮಲ್ ಶುಭ ಹಾರೈಸಿದರು. ಜಮಾಅತ್ ಕಾರ್ಯದರ್ಶಿ ಕೆ ಎಂ ಮೂಸಾನ್, ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ನಿರ್ದೇಶಕರಾದ ಎ ಹನೀಫ್, ಸಂಶುದ್ಧೀನ್ ಪೆಲ್ತಡ್ಕ, ಮುಜೀಬ್ , ದಿಕ್ರ್ ಸ್ವಲಾತ್ ಅಧ್ಯಕ್ಷ ಕೆ ಎಸ್ ಇಬ್ರಾಹಿಂ ಕುಕ್ಕುಂಬಳ, ದುಬೈ ಸಮಿತಿ ಗೌರವಾಧ್ಯಕ್ಷ ಬದ್ರುದ್ದೀನ್ ಪಠೇಲ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಝುಬೈರ್ ಎಸ್ ಇ, ತಾಲೂಕು ಕಾರ್ಯದರ್ಶಿ ಅಬ್ದುಲ್‌ ಖಾದರ್ ಮೊಟ್ಟೆಂಗಾರ್, ಆಶಿಕ್ ಕುಕ್ಕುಂಬಳ, ಮುಝಮಿಲ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭಗಳಲ್ಲಿ ಉಮ್ರಾ ಯಾತ್ರೆ ತೆರಳಿರುವ ಮದರಸ ಸಂಚಾಲಕರಾದ ಅಮೀರ್ ಕುಕ್ಕುಂಬಳ ಮತ್ತು ಪುತ್ರರನ್ನು ಸನ್ಮಾನಿಸಲಾಯಿತು.