ಪಂಜ: ಕುಮಾರಧಾರಾ ನದಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

0


ಪಂಜ ಸಮೀಪ ಪುಳಿಕುಕ್ಕು ಸೇತುವೆ ಬಳಿ ಕುಮಾರಧಾರಾ ನದಿಯಲ್ಲಿ ಸಿಲುಕಿದ ವ್ಯಕ್ತಿಯನ್ನು ರಕ್ಷಣಾ ದಳದವರು ಸ್ಥಳೀಯರ ನೆರವಿನೊಂದಿಗೆ ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ನದಿಯಲ್ಲಿ ಗಿಡಗಳ ಮಧ್ಯೆ
ವ್ಯಕ್ತಿಯೊಬ್ಬರು ಬೊಬ್ಬೆ ಹೊಡೆಯುತ್ತಿರುವುದು ಕಂಡ ಕೆಲವರು ಕಡಬ ಪೊಲೀಸರಿಗೆ ತಿಳಿಸಿದರು.

ಬಳಿಕ ರಕ್ಷಣಾ ದಳದವರು ಬಂದು ಸ್ಥಳಿಯರ ನೆರವಿನಿಂದ, ನದಿ ನೀರಲ್ಲಿ ಗೆಲ್ಲೊಂದನ್ನು ಹಿಡಿದುಕೊಂಡಿದ್ದ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಕಡಬ ಆಸ್ಪತ್ರೆಗೆ ಸೇರಿಸಿದ್ದಾರೆ. ಆತ ಆಕಸ್ಮಿಕ ಬಿದ್ದಿರುವುದಾ ಅಥವಾ ಹಾರಿರುವುದೋ ಎಂದು ತನಿಖೆ ಬಳಿಕ ತಿಳಿಯಲಿದೆ. ಬೆಂಗಳೂರಿನಿಂದ ಬಂದಿದ್ದು ರವಿ ಎಂದು ಪರಿಯಿಸಿದ್ದ ಎಂದು ತಿಳಿದು ಬಂದಿದೆ. ನಿನ್ನೆ ಈ ವ್ಯಕ್ತಿಯನ್ನು ಪುಳಿಕುಕ್ಕು ಸಮೀಪ ಕಂಡವರಿದ್ದಾರೆ ಎನ್ನಲಾಗಿದೆ.