ಮರ್ಕಂಜ : ಪನ್ನೆಬೈಲಿನಲ್ಲಿ ‘ಕಂಡಡೊಂಜಿ ದಿನ’ ಕಾರ್ಯಕ್ರಮ

0

ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಅಮರ ಸಂಘಟನ ಸಮಿತಿ (ರಿ) ಸುಳ್ಯ ಹಾಗೂ ನಾಗ ಸಾನಿಧ್ಯ- ಗುಳಿಗ ಸಾನಿಧ್ಯ ಪನಿವಾರ ಮರ್ಕಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ 5 ನೇ ವರ್ಷದ ‘ಕಂಡಡೊಂಜಿ ದಿನ” ಕಾರ್ಯಕ್ರಮ ವನ್ನು ಮರ್ಕಂಜದ ಪನ್ನೆಬೈಲಿನಲ್ಲಿ ಜುಲೈ 7ರಂದು ರೋಟರಿ ಪಿಯುಸಿಯ ವಿದ್ಯಾರ್ಥಿಗಳಿಗೆ ನಡೆಸಲಾಯಿತು.


ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ರೊ. ಯೋಗಿತಾ ಗೋಪಿನಾಥ್ ರವರು ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಮರ ಸಂಘಟನೆಯ ಅಧ್ಯಕ್ಷರಾದ ಸಾತ್ವಿಕ್ ಮಡಪ್ಪಾಡಿ ರವರು ವಹಿಸಿದ್ದರು. ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೊ. ಪಿಪಿ ಪಿಹೆಚ್ಎಫ್ ಪ್ರಭಾಕರನ್ ನಾಯರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ರೋಟರಿ ಚಾರೀಟೇಬಲ್ ಟ್ರಸ್ಟಿ ರೊ. ಮಧುಸೂದನ್ ಹಾಗೂ ರೋಟರಿ ಕ್ಲಬ್ ನ ಸದಸ್ಯೆ ಶ್ರೀಮತಿ ರೊ. ಲತಾ ಮಧುಸೂದನ್ , ಮಿನುಂಗೂರು ಮರ್ಕಂಜದ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿ, ಅಮರ ಸಂಘಟನಾ ಸಮಿತಿಯ ಸ್ಥಾಪಕಾದ್ಯಕ್ಷರಾದ ಶ್ರೀ ಪ್ರದೀಪ್ ಬೊಳ್ಳೂರು ,ದೇವಚಳ್ಳ ಗ್ರಾಮದ ದ.ಕ ಪ್ರಾಥಮಿಕ ಶಾಲೆ ಸೇವಾಜೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಾಂತಪ್ಪ ರೈ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಹೊಸೋಳಿಕೆ, ಪನ್ನೆಬೈಲು ಗದ್ದೆ ಮಾಲಕರಾದ ಶ್ರೀ ಅಂಬಾಡಿ ಪನ್ನೆಯವರು , ರೋಟರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಮುಂಡೋಡಿ, ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಶ್ರೀ ಸುಧಾಕರ ರೈ, ವ್ಯವಸ್ಥಾಪಕರ ಸಮಿತಿ ಪಂಚಸ್ಥಾಪನೆ ಮರ್ಕಂಜ ನೆಲ್ಲೂರು ಕೆಮ್ರಾಜೆ ಯ ಅಧ್ಯಕ್ಷರಾದ ಶ್ರೀ ರಾಘವ ಕಂಜಿಪಿಲಿ , ಪಂಚಸ್ಥಾಪನೆ ಮರ್ಕಂಜ ನೆಲ್ಲೂರು ಕೆಮ್ರಾಜೆ ಯ ಮಾಜಿ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಕಡಬ ತಾಲ್ಲೂಕಿನ ಉಪ ತಹಸೀಲ್ದಾರ್ ರಾದ ಶ್ರೀ ಗೋಪಾಲ ಕೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿನಿಯರಾದ ಅವನಿ ಎನ್, ದಿಶಾ ಪಿ ವೈ, ಭಾನವಿ ಕೊೖಂಗಾಜೆ, ಪ್ರಾರ್ಥನೆಗೈದು,ಉದ್ಘಾಟನ ಸಮಾರಂಭದ ವಂದನಾರ್ಪಾಣಿಯನ್ನು ಪಿಯುಸಿ ವಿದ್ಯಾರ್ಥಿ ಸೋಹನ್ ಎಂ ಎಸ್ ಹಾಗೂ ಸಮಾರೋಪದ ಸಮಾರಂಭದ ವಂದನಾರ್ಪಾಣಿಯನ್ನು ಉಪನ್ಯಾಸಕ ವೊಮನ್ ದಾಸ್ ನೆರವೇರಿಸಿದರು.ಉದ್ಘಾಟನ ಸಮಾರಂಭದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಯಶಸ್ವಿ ಪಿ ಭಟ್ ಮತ್ತು ವೈಷ್ಣವಿ ಕೆ ಹಾಗೂ ಶ್ರೀ ತೀರ್ಥೇಶ್ ಯಾದವ ನಾರ್ಣಕಜೆ , ಶ್ರೀ ನವೀನ ಬಾಂಜಿಕೊಡಿ ಶ್ರೀ ಶಶಿಕಾಂತ ಮಿತ್ತೂರು, ಶ್ರೀ ನಿರಂತ್ ದೇವಸ್ಯ ರವರುಗಳು ಇಡೀ ದಿನದ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭವಾನಿ ಅಕ್ಕ ಹಾಗೂ ತಂಡದವರಿಂದ
ಪಾರ್ದನ ಹಾಡು,ನೇಜಿ ನೆಡುವುದು ಮತ್ತು ಸಾಂತಪ್ಪ ರೈ ಯವರ ಸಾರಥ್ಯದಲ್ಲಿ ಅಂಬಾಡಿಯವರ ಕೋಣದೊಂದಿಗೆ ಅವರ ತಂಡದವರು ಕಂಬಳದ ಪ್ರಾತ್ಯಕ್ಷಿಕೆಯೊಂದಿಗೆ ಸಾಂಪ್ರದಾಯಿಕ ಶೈಲಿಯ ಭತ್ತ ಬೇಸಾಯ ಪದ್ದತಿಯ ತಿಳುವಳಿಕೆ ನೀಡಲಾಯಿತು. ಹಾಗೆಯೇ ವಿದ್ಯಾರ್ಥಿಗಳು ದಿನವಿಡೀ ಹಳ್ಳಿಯ ಸಾಂಪ್ರದಾಯಿಕ ಆಟಗಳಾದ ಹಗ್ಗ ಜಗ್ಗಾಟ, ಹಿಂದು-ಮುಂದು ಓಟ, ಬುಗುರಿ ಆಟ, ಮೂರುಕಾಲಿನ ಓಟ, ಛದ್ಮವೇಷ, ಜಾನಪದ ನೃತ್ಯ, ರಿಲೇ,ಅಂಬುಗಾಯಿ, ಹ್ಯಾಂಡ್ಬಾಲ್ ಮುಂತಾದ ಆಟಗಳನ್ನ ಗದ್ದೆಯಲ್ಲಿ ಆಡಿ ,ಕುಣಿದು ನಲಿದಿದ್ದಾರೆ.