ಸುಳ್ಯದ ಸಿ.ಎ. ಬ್ಯಾಂಕ್ ತಾಲೂಕಿನ ಎಲ್ಲ ಸಹಕಾರಿ ಸಂಘಕ್ಕೆ ಮಾದರಿ : ಎಸ್.ಎನ್. ಮನ್ಮಥ
“ಸುಳ್ಯದ ಸಿ.ಎ. ಬ್ಯಾಂಕ್ ತಾಲೂಕಿನ ಎಲ್ಲ ಸಹಕಾರಿ ಸಂಘಕ್ಕೆ ಮಾದರಿ.
ಎಲ್ಲರಿಗೂ ಸಹಕಾರ ಆಗುವಂತೆ ಗ್ರಾಹಕರ ಸೇವಾ ಕೇಂದ್ರವನ್ನು ಪ್ರಥಮವಾಗಿ ಸಹಕಾರಿ ಸಂಘದಲ್ಲಿ ಆರಂಭಿಸಿರುವುದು ಶ್ಲಾಘನೀಯ. ಆಧುನಿಕ ಕಾಲದಲ್ಲಿ ಗ್ರಾಹಕರಿಗೆ ವೇಗದ ಸೇವೆ ಸಿಗಬೇಕು. ಆ ನಿಟ್ಟಿನಲ್ಲಿ ಈ ರೀತಿಯ ಸೇವಾ ಕೇಂದ್ರ ಅವಶ್ಯಕ” ಎಂದು ಸುಳ್ಯ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಎಸ್.ಎನ್. ಮನ್ಮಥ ಹೇಳಿದರು.
ಜು.9ರಂದು ಸುಳ್ಯದ ಸಿ.ಎ. ಬ್ಯಾಂಕ್ ವತಿಯಿಂದ ನೂತನವಾಗಿ ಆರಂಭಗೊಂಡಿರುವ ಗ್ರಾಹಕರ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಬೆಳೆ ವಿಮೆ ಸೇರಿದಂತೆ ಸರಕಾರದ ಯೋಜನೆಯನ್ನು ಆನ್ ಲೈನ್ ಮೂಲಕ ಗ್ರಾಹಕರಿಗೆ ಅರ್ಜಿ ಸಲ್ಲಿಸಲು ಪ್ರಯೋಜನ ವಾಗುವಂತೆ ತೆರೆಯಲಾಗಿದೆ ಇದರ ಸದುಪಯೋಗ ಎಲ್ಲರಿಗೂ ಸಿಗಲಿ ಎಂದು ಹೇಳಿದರು.
ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಕೆ. ಉಮೇಶ್ ದೀಪ ಬೆಳಗಿದರು.
ಸಂಘದ ಮಾಜಿ ಅಧ್ಯಕ್ಷರುಗಳಾದ ಸುಭೋದ್ ಶೆಟ್ಟಿ ಮೇನಾಲ, ಬಾಲಗೋಪಾಲ ಸೇರ್ಕಜೆ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕ ಮಾತನಾಡಿದ ಅವರು “ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸೇವಾ ಕೇಂದ್ರ ತೆರೆಯಲಾಗಿದ್ದು ತಾಲೂಕಿನಲ್ಲೆ ಪ್ರಥಮವಾಗಿ ನಮ್ಮ ಸಹಕಾರಿ ಸಂಘ ಆರಂಭಿಸಿದೆ. ಇಲ್ಲಿ ನಮಗೆ ಲಾಭದ ಆಕಾಂಕ್ಷೆ ಇಲ್ಲ. ಜನರಿಗೆ ಸೇವೆ ಸಿಗಬೇಕೆಂದು ನಮ್ಮ ಆಶಯ” ಎಂದು ಹೇಳಿದರು.
ಸಿ.ಎ. ಬ್ಯಾಂಕ್ ನಿರ್ದೇಶಕರುಗಳಾದ ಶಿವರಾಮ ಕೇರ್ಪಳ, ಪ್ರಬೋದ್ ಶೆಟ್ಟಿ ಮೇನಾಲ, ಚಂದ್ರಶೇಖರ ದೊಡ್ಡೇರಿ, ವೆಂಕಟ್ರಮಣ ಮುಳ್ಯ, ಕೇಶವ ಮಾಸ್ಟರ್ ಹೊಸಗದ್ದೆ, ಹರಿಣಾಕ್ಷಿ ಬೇಲ್ಯ, ನವ್ಯಾ ಚಂದ್ರಶೇಖರ ಅಡ್ಪಂಗಾಯ, ವಾಸುದೇವ ಪುತ್ತಿಲ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ಕಾರ್ಯಕ್ರಮ ನಿರ್ವಹಿಸಿದರು.