ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಸುಳ್ಯ ನಗರ- ವರಮಹಾಲಕ್ಷ್ಮಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, 2024 ನೇ ಸಾಲಿನ ವರಮಹಾಲಕ್ಷ್ಮಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಸವಿತಾ ಆನಂದ ಪಾತಿಕಲ್ಲು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ನಮಿತಾ ರಾವ್, ಕಾರ್ಯದರ್ಶಿಯಾಗಿ ಶ್ರೀಮತಿ ಪದ್ಮಿನಿ ಲೋಕೇಶ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ರೋಹಿಣಿ ಕಲ್ಲುಗದ್ದೆ, ಶ್ರೀಮತಿ ಸುಮಿತ ದೊಡ್ಡೇರಿ ,ಖಜಾಂಚಿಯಾಗಿ ಡಾಕ್ಟರ್ ಪ್ರಜ್ಞಾ ಮನುಜೇಶ್ ಆಯ್ಕೆಯಾದರು. ಆ. 16ರಂದು ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ವರಮಹಾಲಕ್ಷ್ಮಿ ವ್ರತದ ಆಚರಣೆಯ ಕಾರ್ಯಕ್ರಮ ನಡೆಯಲಿರುವುದು.