ಬೆಳ್ಳಾರೆ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಹೊತ್ತಲ್ಲಿ ವೈದ್ಯರಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಇಲ್ಲಿಗೆ ಖಾಯಂ ವೈದ್ಯರ ನೇಮಕವಾಗಬೇಕೆಂದು ಕಾರ್ಯಕರ್ತರು ಸಂಸದ ಬ್ರಿಜೇಶ್ ಚೌಟರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಬೆಳ್ಳಾರೆ ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆ ಆದರೂ, ಯಾವುದೇ ವ್ಯವಸ್ಥೆ ಇಲ್ಲದ ಕಾರಣದಿಂದ ರಾತ್ರಿ ಹೊತ್ತಲ್ಲಿ ಕೂಡ ವೈದ್ಯರು ಇಲ್ಲದಿರುವಿಕೆ, ಹಾಗೂ ಮೂಲಭೂತ ಸೌಕರ್ಯಗಳು ಇಲ್ಲದೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ, ಆದಷ್ಟು ಬೇಗ ಇಲ್ಲಿಯ ವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ಚಂದ್ರಶೇಖರ ಪನ್ನೆ, ಕುಶಾಲಪ್ಪ ಗೌಡ ಪೆರುವಾಜೆಯವರು ಉಪಸ್ಥಿತರಿದ್ದರು.