ಐವರ್ನಾಡು ಗ್ರಾಮದ ಚಳ್ಳತ್ತಡಿ ( ಸಾರಕೆರೆ) ಎಂಬಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಸಂಸದ ಬ್ರಿಜೇಶ್ ಚೌಟರಿಗೆ ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿಯವರು ಜು.10 ರಂದು ಮನವಿಯನ್ನು ನೀಡಿದ್ದಾರೆ.
ಮನವಿಯಲ್ಲಿ ಐವರ್ನಾಡು ಗ್ರಾಮದ ಚಲ್ಲತ್ತಡಿ ಎಂಬಲ್ಲಿ ಹೊಳೆ ಇದ್ದು ಹೊಳೆಗೆ ಸೇತುವೆ ಇಲ್ಲದಿರುವುದರಿಂದ ಈ ಭಾಗದ ಜನರಿಗೆ ತೊಂದರೆಯಾಗಿದೆ.ಇಲ್ಲಿ 200-250 ಕುಟುಂಬಗಳಿದ್ದು ಸಂಚಾರಕ್ಕೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಇಲ್ಲಿಯ ಬೇಡಿಕೆ ಸುಮಾರು 40ವರ್ಷಗಳಿಂದ ಇದ್ದು ಇಲ್ಲಿ ಪರಿಶಿಷ್ಡ ಜಾತಿ ಕಾಲನಿಗಳು ಕೂಡ ಇದ್ದು ಜನರಿಗೆ ತೊಂದರೆಯಾಗಿದೆ.ಶಾಲಾ ವಿದ್ಯಾರ್ಥಿ ಗಳಿಗೂ ತೊಂದರೆಯಾಗಿದೆ.ಪ್ರತೀ ವರ್ಷ ಗ್ರಾಮ ಸಭೆಯಲ್ಲಿ ಇಲ್ಲಿಯ ಸೇತುವೆಯ ಬಗ್ಗೆ ಪ್ರಸ್ತಾಪವಾಗುತ್ತಿದೆ.
ಆದುದರಿಂದ ಇಲ್ಲಿಯ ಸೇತುವೆಗೆ ಅನುದಾನ ಇರಿಸಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶಾಂತಾರಾಮ ಕಣಿಲೆಗುಂಡಿ ಜತೆಗಿದ್ದರು.