ಜು.12: ರೋಟರಿ ಕ್ಲಬ್ ಸುಳ್ಯ ಸಿಟಿ ಪದಗ್ರಹಣ ಸಮಾರಂಭ

0

ರೋಟರಿ ಕ್ಲಬ್ ಸುಳ್ಯ ಸಿಟಿಯ ಮುಂದಿನ ಸಾಲಿನ 2024-25 ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.12 ರಂದು ಸುಳ್ಯದ ರಥಬೀದಿಯಲ್ಲಿರುವ ರೋಟರಿ ಕಮ್ಯುನಿಟಿ ಹಾಲ್ ನಲ್ಲಿ ನಡೆಯಲಿರುವುದು.


ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ. ಯೋಗಿತ ಗೋಪಿನಾಥ್
ಪದ ಪ್ರಧಾನ ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ರೊ. ರಾಮಕೃಷ್ಣ ಪಿ.ಕೆ, ರೊ. ಡಾ. ಹರ್ಷಕುಮಾರ್ ರೈ,ರೊ. ಮುರಳೀಧರ ರೈ, ರೊ.ಡಾ.ಕೇಶವ ಪಿ.ಕೆ ಉಪಸ್ಥಿತರಿರುವರು. ಮುಂದಿನ ಸಾಲಿನ ಅಧ್ಯಕ್ಷರಾಗಿ ರೊ.ಶಿವಪ್ರಸಾದ್ ಕೆ.ವಿ, ಕಾರ್ಯದರ್ಶಿ ರೊ.ನವೀನ್ ಅಳಿಕೆ, ಖಜಾಂಜಿ ರೊ.ನವೀನ್ ಚಂದ್ರ ಬಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಅಧಿಕಾರ ಸ್ವೀಕರಿಸಲಿರುವರು.