ಸುಳ್ಯ ಸ್ನೇಹ ಶಾಲೆಯಲ್ಲಿ ಕೃತಕ ಗದ್ದೆಯಲ್ಲಿ ಭತ್ತ ಬೇಸಾಯದ ನಾಟಿ ಕಾರ್ಯ

0

ಶಾಲಾ ಪರಿಸರದಲ್ಲಿ ಕೃತಕ ಗದ್ದೆ ನಿರ್ಮಿಸಿ
ಪ್ರಾತ್ಯಕ್ಷಿಕೆಯೊಂದಿಗೆ ಮಕ್ಕಳಿಗೆ ಭತ್ತ ಬೇಸಾಯದ ಶಿಕ್ಷಣ

ಸುಳ್ಯದ ಕಲ್ಲುಮುಟ್ಲುನಲ್ಲಿರುವ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕೃತಕ ಗದ್ದೆ ನಿರ್ಮಿಸಿ ಭತ್ತ ಬೇಸಾಯದ ನಾಟಿ ಮಾಡುವ ಕಾರ್ಯವನ್ನು ಜು.10 ರಂದು ಹಮ್ಮಿಕೊಳ್ಳಲಾಯಿತು.

ಶಾಲೆಯ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆ ಯವರ ನಿರ್ದೇಶನದಂತೆ
ಶಾಲೆಯ ಪರಿಸರದಲ್ಲಿ ಇರುವ ಮೈದಾನದ ಒಂದು ಭಾಗದಲ್ಲಿ ಕೃತಕವಾಗಿ ಜೆಸಿಬಿ ಬಳಸಿ ಗದ್ದೆ ನಿರ್ಮಿಸಿ ನಂತರ ಮಣ್ಣನ್ನು ಹದಬರಿಸಿ ಬೇಸಾಯದ ಗದ್ದೆಗೆ ಬೇಕಾಗಿರುವ ಸೆಗಣಿ ಗೊಬ್ಬರ ಹಾಕಿ ಟಿಲ್ಲರ್ ನಿಂದ ಉಳುಮೆ ಮಾಡಿ ಗದ್ದೆ ನಿರ್ಮಿಸಲಾಯಿತು. ಆಲೆಟ್ಟಿಯ ಗುಂಡ್ಯ ನಿವಾಸಿ ಭತ್ತ ಕೃಷಿಯಲ್ಲಿ ಅನುಭವ ಹೊಂದಿದ ಕೃಷಿಕ ನಿತ್ಯಾನಂದ ಮತ್ತು ಪರಿವಾರ ಬಾಲಕೃಷ್ಣ ಗೌಡ ರವರ ಮಾಹಿತಿ ಮಾರ್ಗದ ರ್ಶನದಂತೆ ಭತ್ತ ಬೇಸಾಯದ ಕೃಷಿ ಪದ್ಧತಿ ಪ್ರಕಾರ ನೇಜಿ ನೆಡುವ ಕಾರ್ಯವನ್ನು ಮಾಡಲಾಯಿತು. ಮಕ್ಕಳಿಗೆ ಹಂತ ಹಂತವಾಗಿ ಬೇಸಾಯ ಪದ್ಧತಿಯ ಕುರಿತು ವಿವರಣೆಯೊಂದಿಗೆ ಯಾವ ರೀತಿಯಲ್ಲಿ ನೇಜಿ ನೆಡಬೇಕು ಎಂಬುದಾಗಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಶಾಲೆಯ ಸಂಸ್ಥಾಪಕರಾದ ಡಾ.ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಯವರು ಮತ್ತು ಶಿಕ್ಷಕರು, ಶಾಲಾ ಸಿಬ್ಬಂದಿಗಳು ನಾಟಿ ಕಾರ್ಯದಲ್ಲಿ ಸ್ವತಃ ಗದ್ದೆಗಿಳಿದು ನೇಜಿ ನೆಟ್ಟರು.


ಮಕ್ಕಳು ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದರು.
ಲೇ ಲೇ ಇಂದ ಬಲ ಮಗಾ ದೂಜಿಕೆ ಮೈರಾ ಎಂಬ ಹಾಡನ್ನುಹಾಡುವುದರೊಂದಿಗೆ ಮಕ್ಕಳು ಶಿಕ್ಷಕರು ಜತೆಯಾಗಿ ನೇಜಿ ನೆಟ್ಟು ಭತ್ತದ ನಾಟಿ ಮಾಡಿದರು.