ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ವಾಹಕ ಲೋಕೇಶ್ ಜೋಗಿಮೂಲೆ ಸೇವಾ ನಿವೃತ್ತಿ

0

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿದ್ದ ಮರ್ಕಂಜ ಗ್ರಾಮದ ಜೋಗಿಮೂಲೆ ಲೋಕೇಶ್ ಗೌಡರು ಜೂ.30 ರಂದು ಸೇವಾ ನಿವೃತ್ತಿ ಹೊಂದಿದರು.
1994 ಸೆಪ್ಟಂಬರ್‌ನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ 13 ರಲ್ಲಿ ನಿರ್ವಾಹಕರಾಗಿ ಸೇವೆಗೆ ಹಾಜರಾಗಿದ್ದ ಲೋಕೇಶ್‌ರು 2012 ರ ಜನವರಿಯಿಂದ 2021 ರ ಮೇ ವರೆಗೆ ಘಟಕ -20 ರಲ್ಲಿ ಹಾಗೂ 2024 ಜೂನ್ 30 ರವರೆಗೆ ಘಟಕ -೪ ರಲ್ಲಿ ಸುಧೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಮರ್ಕಂಜ ಗ್ರಾಮದ ಜೋಗಿಮೂಲೆ ದಿ.ರಾಮಣ್ಣ ಗೌಡ ಮತ್ತು ದಿ.ಗಂಗಮ್ಮ ದಂಪತಿಗಳ ಪುತ್ರರಾದ ಲೋಕೇಶ್‌ರು ಪತ್ನಿ ಪದ್ಮಾ ಲೋಕೇಶ್ ಹಾಗೂ ಮಗಳು ಕೀರ್ತಿಶ್ರೀಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.