ದ.ಕ. ಸಂಪಾಜೆ ಗ್ರಾಮದ ದೊಡ್ಡಡ್ಕದಲ್ಲಿ ಬಾರೀ ಮಳೆಗೆ ಮನೆಯ ಬಾವಿಯೊಂದಕ್ಕೆ ಮಣ್ಣು ಕುಸಿದು ಬಿದ್ದಿರುವ ಘಟನೆ ಜು.15ರಂದು ಸಂಭವಿಸಿದೆ.
ದೊಡ್ಡಡ್ಕ ನಿವಾಸಿ ಖಾದರ್ ಅವರ ಮನೆಯಲ್ಲಿ ನೀರು ಕುಡಿಯಲು ಉಪಯೋಗಿಸುತ್ತಿದ್ದ ಬಾವಿಯ ಬದಿಯಲ್ಲಿದ್ದ ಮಣ್ಣು ಮಳೆಗೆ ಕುಸಿದು ಬಿದ್ದಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಖಾದರ್ ಅವರು ಗ್ರಾ.ಪಂ.ಗೆ ಮಾಹಿತಿ ತಿಳಿಸಿದ ಮೇರೆಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಓಲ್ಗಾ ಡಿಸೋಜ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ. ಹನೀಫ್ ಕಲ್ಲುಗುಂಡಿ, ಸದಸ್ಯ ಜಿ.ಕೆ. ಹಮೀದ್, ಗ್ರಾಮ ಆಡಳಿತಾಧಿಕಾರಿ ಮಂಜುನಾಥ್, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದು, ಬಾವಿ ಅಪಾಯದ ಸ್ಥಿತಿಯಲ್ಲಿರುವುದರಿಂದ ಮುಚ್ಚಲು ನಿರ್ಧರಿಸಲಾಗಿರುವುದೆಂದು ತಿಳಿದುಬಂದಿದೆ.